ಫಲಿಸಿದ ಹರಕೆ | ಕೆನಡಾದಿಂದ ಮಾದಪ್ಪನ ಬೆಟ್ಟಕ್ಕೆ ಬಂದು ಗೋವು ಕೊಟ್ಟ ಭಕ್ತ

madappa
31/12/2022

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಕೆನಡಾದಿಂದ ಬಂದು ಹಸುವಿನ ಕರುವೊಂದನ್ನು ಕೊಡುಗೆ ಕೊಟ್ಟು ಹರಕೆ ತೀರಿಸಿರುವ ವಿಶೇಷ ಘಟನೆ ಇಂದು ನಡೆದಿದೆ.

ಹೌದು…, ದಕ್ಷಿಣ ಭಾರತದ ಪ್ರಮುಖ ದೇಗುಲಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಬಂದ ಕೆನಡಾದಿಂದ ಬಂದ ವೆಂಕಟೇಶ್ ಹಾಗೂ ಲಕ್ಷ್ಮಿ ಎಂಬ ದಂಪತಿ ಕ್ಷೇತ್ರದಲ್ಲಿನ ಸಾಲೂರು ಮಠಕ್ಕೆ ಹೆಣ್ಣು ಕರುವೊಂದನ್ನು ಕೊಡುಗೆ ಕೊಟ್ಟಿದ್ದಾರೆ.

ಅಂದಹಾಗೆ,  ವೆಂಕಟೇಶ್ ಮತ್ತು ಲಕ್ಷ್ಮಿ ದಂಪತಿ ಬೆಂಗಳೂರಿನವರಾಗಿದ್ದು ಸದ್ಯ ಕೆನಡಾದಲ್ಲಿ ನೆಲೆಸಿದ್ದಾರೆ‌. ಕಟ್ಟಿಕೊಂಡಿದ್ದ ಹರಕೆಯೊಂದು ಫಲಿಸಿದ ಹಿನ್ನೆಲೆಯಲ್ಲಿ ಗೋವನ್ನು ಮಠಕ್ಕೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version