1:01 AM Thursday 16 - October 2025

ಚಿರು ಪುತ್ರ-ಮೇಘನಾ ರಾಜ್ ಅವರನ್ನು ನೋಡಲು ಬಂದ ಕೇರಳದ ಸ್ಟಾರ್ ನಟ ದಂಪತಿ

25/10/2020

ಸರ್ಜಾ ಕುಟುಂಬಕ್ಕೆ ಗುರುವಾರ ಸಿಹಿ ಸುದ್ದಿ ಸಿಕ್ಕಿತ್ತು. ಕೆಲ ತಿಂಗಳ ಹಿಂದಷ್ಟೇ ಗಂಡ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದ ನಟಿ ಮೇಘನಾ ರಾಜ್​ ಈಗ ಗಂಡುಮಗುವಿಗೆ ಜನ್ಮ ನೀಡಿದ್ದರು. ಈ ಮೂಲಕ ಸರ್ಜಾ ಕುಟುಂಬಕ್ಕೆ ಜೂನಿಯರ್​ ಸರ್ಜಾ ಅವರ ಆಗಮನವಾಗಿತ್ತು. ಅನೇಕ ಸ್ಟಾರ್​ ನಟ-ನಟಿಯರು ಬಂದು ಮೇಘನಾ ಆರೋಗ್ಯ ವಿಚಾರಿಸಿ, ಶುಭಕೋರಿ ಹೋಗಿದ್ದರು. ಈಗ ಮಲಯಾಳಂನ ಖ್ಯಾತ ಸ್ಟಾರ್​ ದಂಪತಿ ನಜ್ರಿಯಾ ನಜೀಮ್-ಫಹಾದ್ ಫಾಸಿಲ್ ಬೆಂಗಳೂರಿಗೆ ಆಗಮಿಸಿದ್ದಾರೆ. ಇಬ್ಬರೂ ಕೇರಳದಿಂದ ಕಾರಿನಲ್ಲೇ ಆಗಮಿಸಿದ್ದು ವಿಶೇಷವಾಗಿತ್ತು.

ಇತ್ತೀಚೆಗಷ್ಟೇ ಚಿರಂಜೀವಿ ಸರ್ಜಾ ಜನ್ಮದಿನ ಆಚರಣೆ ಮಾಡಿತ್ತು ಸರ್ಜಾ ಕುಟುಂಬ. ಅದೇ ದಿನವೇ ಮೇಘನಾಗೆ ಹೆರಿಗೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಕೆಲ ದಿನ ಬಿಟ್ಟು ಜೂನಿಯರ್​ ಚಿರು ಆಗಮಿಸಿದ್ದ. ವಿಶೇಷ ಎಂದರೆ, ಗುರುವಾರ ಚಿರು ಸರ್ಜಾ- ಮೇಘನಾ ನಿಶ್ಚಿತಾರ್ಥದ ದಿನ. ಅದೇ ದಿನವೇ ಮೇಘನಾಗೆ ಮಗುವಾಗಿತ್ತು. ಈಗ ಮೇಘನಾ ಆಪ್ತ ಸ್ನೇಹಿತರಾದ ನಜ್ರಿಯಾ ನಜೀಮ್-ಫಹಾದ್ ಫಾಸಿಲ್ ಬೆಂಗಳೂರಿಗೆ ಆಗಮಿಸಿ ಮೇಘನಾ ಆರೋಗ್ಯ ವಿಚಾರಿಸಿದ್ದಾರೆ.

fahad fazil nazriya

ಕನಕಪುರ ರಸ್ತೆಯ ಧ್ರುವ ಸರ್ಜಾ ಒಡೆತನದ ಬೃಂದಾವನ ಫಾರ್ಮ್ ಹೌಸ್ ನಲ್ಲಿರುವ ಚಿರು ಸಮಾಧಿ ಇದೆ. ಮಗು ಹಾಗೂ ತಾಯಿ ಆರೋಗ್ಯ ವಿಚಾರಿಸಿದ ನಂತರ ನಿರ್ದೇಶಕ ಪನ್ನಗಾಭರಣ ಜತೆ ನಜ್ರಿಯಾ ನಜೀಮ್-ಫಹಾದ್ ಫಾಸಿಲ್ ಚಿರು ಸರ್ಜಾ ಸಮಾಧಿಗೆ ತೆರಳಿದ್ದಾರೆ. ಸಮಾಧಿಗೆ ಭೇಟಿ ನೀಡಿದ ನಂತರದಲ್ಲಿ ಅವರು ಬೆಂಗಳೂರಲ್ಲಿ ಕೆಲ ಕಾಲ ವಿಶ್ರಮಿಸಿ ಕೇರಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಇದು ಕೊರೋನಾ ಸಂದರ್ಭ. ಈ ವೇಳೆ ವಿಮಾನದಲ್ಲಿ ಬಂದರೆ ವೈರಸ್​ ಅಂಟುವ ಸಾಧ್ಯತೆ ಇರುತ್ತದೆ. ಈ ವೇಳೆ ತಾಯಿ ಹಾಗೂ ಮಗುವನ್ನು ಭೇಟಿ ಮಾಡೋದು ಅಷ್ಟೊಂದು ಸೇಫ್​ ಅಲ್ಲ. ಹೀಗಾಗಿ, ಇಬ್ಬರೂ ಕಾರಿನಲ್ಲೇ ಬಂದಿದ್ದಾರೆ.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ಇತ್ತೀಚಿನ ಸುದ್ದಿ

Exit mobile version