ಬಸ್ಸಿನಲ್ಲಿಯೇ ಮಗುವಿಗೆ ಜನ್ಮ ನೀಡಿದ ಕೇರಳದ ಮಹಿಳೆ

ಕೇರಳದ ಮಲಪ್ಪುರಂನ 37 ವರ್ಷದ ಮಹಿಳೆಯು ತ್ರಿಶೂರ್ ನಿಂದ ಕೋಯಿಕ್ಕೋಡ್ ನ ತೊಟ್ಟಿಲ್ಪಾಲಂಗೆ ಪ್ರಯಾಣಿಸುತ್ತಿದ್ದಾಗ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಪೆರಮಂಗಲಂ ಮೂಲಕ ಹಾದು ಹೋಗುವ ಬಸ್ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಈ ಘಟನೆ ನಡೆದಿದೆ.
ಬಸ್ ತ್ರಿಶೂರ್ ಜಿಲ್ಲೆಯ ಪೆರಮಂಗಲಂ ದಾಟುತ್ತಿದ್ದಂತೆ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದ ಗಮನಿಸಿದ ಬಸ್ ಚಾಲಕ ಕೂಡಲೇ ಮಾರ್ಗವನ್ನು ಬದಲಾಯಿಸಿ ಅಮಲಾ ಆಸ್ಪತ್ರೆಯತ್ತ ಹೋಗಿದ್ದಾರೆ. ಬಸ್ ಸಿಬ್ಬಂದಿ ಹೆರಿಗೆಯ ಬಗ್ಗೆ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ತಲುಪಿದ ನಂತರ, ಪ್ರಯಾಣಿಕರನ್ನು ಕೆಳಗಿಳಿಸಿ, ವೈದ್ಯರು ಮತ್ತು ದಾದಿಯರು ಮಹಿಳೆಗೆ ಚಿಕಿತ್ಸೆ ನೀಡಲು ಅನುವು ಮಾಡಿಕೊಟ್ಟರು.
ಬಸ್ ಸಿಬ್ಬಂದಿ ಮತ್ತು ಅಮಲಾ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರ ಸಮಯೋಚಿತ ಸಹಾಯದಿಂದಾಗಿ ಅವರು ಬಸ್ಸಿನೊಳಗೆ ಆರೋಗ್ಯಕರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ತುರ್ತು ಸಂದರ್ಭದಲ್ಲಿ ಮಹಿಳೆಗೆ ಅಗತ್ಯ ವೈದ್ಯಕೀಯ ನೆರವು ಸಿಗುವಂತೆ ಕೆಎಸ್ಆರ್ ಟಿಸಿ ಬಸ್ ಸಿಬ್ಬಂದಿ ಶ್ರಮಿಸಿದ್ದಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth