ಪೇಪರ್ ಪಾರಿವಾಳದ ಜೊತೆ ಆಟವಾಡುತ್ತಾ ಕಟ್ಟಡದಿಂದ ಕೆಳಗೆ ಬಿದ್ದ 5 ವರ್ಷದ ಬಾಲಕ!: ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆ
ಕೊಪ್ಪಳ: ನಗರದ ಹಮಾಲರ ಕಾಲೋನಿಯಲ್ಲಿ ಪೇಪರ್ ಪಾರಿವಾಳದೊಂದಿಗೆ ಆಟವಾಡುತ್ತಿದ್ದ ಐದು ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಮೊದಲ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮಹಮ್ಮದ್ ಹ್ಯಾರಿಸ್ ಗಾಯಗೊಂಡ ಬಾಲಕ.
ನಡೆದದ್ದೇನು?: ಮಹಮ್ಮದ್ ಹ್ಯಾರಿಸ್ ಸೋಮವಾರ ಮಧ್ಯಾಹ್ನ ತನ್ನ ಮನೆಯ ಮೊದಲ ಮಹಡಿಯಲ್ಲಿ ಕಾಗದದಿಂದ ಮಾಡಿದ ಪಾರಿವಾಳವನ್ನು ಹಾರಿಸುತ್ತಾ ಆಟವಾಡುತ್ತಿದ್ದನು. ಗಾಳಿಯಲ್ಲಿ ತೇಲುತ್ತಿದ್ದ ಪಾರಿವಾಳವನ್ನು ಹಿಡಿಯಲು ಹೋದಾಗ ಆಯತಪ್ಪಿ ನೇರವಾಗಿ ಕೆಳಗೆ ಬಿದ್ದಿದ್ದಾನೆ. ಬಾಲಕ ಬೀಳುತ್ತಿದ್ದಂತೆಯೇ ಕೆಳಗೆ ಆಟವಾಡುತ್ತಿದ್ದ ಆತನ ಸಹೋದರಿ ಕಿರುಚಿಕೊಂಡಿದ್ದಾಳೆ. ತಕ್ಷಣ ಧಾವಿಸಿ ಬಂದ ಪೋಷಕರು ಬಾಲಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಾಣಾಪಾಯದಿಂದ ಪಾರು: ಬಿದ್ದ ರಭಸಕ್ಕೆ ಬಾಲಕನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ವೈದ್ಯಕೀಯ ತಪಾಸಣೆಯಲ್ಲಿ ತಲೆಬುರುಡೆಯಲ್ಲಿ ಬಿರುಕು ಕಂಡುಬಂದಿದೆ. ತಕ್ಷಣವೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. “ಬಾಲಕ ಪವಾಡಸದೃಶವಾಗಿ ಬದುಕಿ ಬಂದಿದ್ದಾನೆ” ಎಂದು ವೈದ್ಯರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























