ಕೆಎಸ್ ಆರ್ ಟಿಸಿ ಬಸ್ ಗೆ ಮದ್ಯದ ಬಾಟಲಿ ಎಸೆದ ಯುವಕರು: ಪ್ರಶ್ನಿಸಿದ್ದಕ್ಕೆ ಡ್ರೈವರ್ ಗೆ ಪಂಚ್!
ಚಿಕ್ಕಮಗಳೂರು: ಎಣ್ಣೆ ಏಟಲ್ಲಿದ್ದ ಯುವಕರು ಕೆಎಸ್ ಆರ್ ಟಿಸಿ ಬಸ್ ಗೆ ಮದ್ಯದ ಖಾಲಿ ಬಾಟಲಿ ಎಸೆದಿದ್ದಲ್ಲದೇ ಬಸ್ಸಿನ ಚಾಲಕ ಹಾಗೂ ನಿರ್ವಾಹಕನಿಗೆ ಥಳಿಸಿದ ಘಟನೆ ಬೀರೂರು ಸಮೀಪದ ಹೋರಿತಿಮ್ಮನಹಳ್ಳಿ ಗೇಟ್ ಬಳಿ ನಡೆದಿದೆ.
ಸತೀಶ್ ಬೀರೂರು ಹಲ್ಲೆಗೊಳಗಾದ ಡ್ರೈವರ್ ಆಗಿದ್ದು, ಡ್ರೈವರ್ ಗೆ ಥಳಿಸಿದ್ದನ್ನು ಪ್ರಶ್ನಿಸಿದ ಕಂಡೆಕ್ಟರ್ ಗೂ ದುಷ್ಕರ್ಮಿಗಳು ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಿರಣ್, ಸತೀಶ್, ಸಚಿನ್, ಸುಪ್ರೀತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಕಡೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ಸಿನ ಮೇಲೆ ಕಾರಿನಲ್ಲಿ ಹೋಗುತ್ತಿದ್ದ ಯುವಕರು ಮದ್ಯದ ಗಾಜಿನ ಬಾಟಲಿ ಎಸೆದಿದ್ದಾರೆ. ಈ ಬಾಟಲಿ ಬಸ್ಸಿನ ಮುಂಭಾಗದ ಗ್ಲಾಸ್ ಗೆ ಬಡಿದಿದೆ. ಇದನ್ನು ಪ್ರಶ್ನಿದಾಗ ಚಾಲಕ ಸತೀಶ್ ಗೆ ಯುವಕರು ಥಳಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಯುವಕರೆಲ್ಲರೂ ಕುಡಿತದ ಮತ್ತಿನಲ್ಲಿದ್ದು, ಡ್ರೈವರ್ ಸತೀಶ್ ಗೆ ಯುವಕರು ಪಂಚ್ ಮಾಡಿದ್ದು, ಅವರು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

























