3:36 PM Wednesday 10 - December 2025

ಮದುವೆಯಾಗಲು ನಿರಾಕರಿಸಿದ ಖ್ಯಾತ ನಟಿಗೆ ರಸ್ತೆಯಲ್ಲೇ ಇರಿದ ಯುವಕ!

27/10/2020

ಮುಂಬೈ: ನಟಿ ಮಾಲ್ವಿ ಮಲೋತ್ರಾಗೆ ಯುವಕನೋರ್ವ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಅವರನ್ನು  ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ಟೋಬರ್ 20ರಂದು ರಾತ್ರಿ  ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

 ವಿಶಾಲ್ ಮಿಶ್ರಾ ನಿರ್ದೇಶನದ ಹೋಟೆಲ್ ಮಿಲನ್ ಹಿಂದಿ ಸಿನಿಮಾದಲ್ಲಿ ನಟಿಸಿದ್ದ ಮಾಲ್ವಿ ಹಲವು ಟಿವಿ ಶೋಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೋರ್ವ ಮದುವೆ ಪ್ರಸ್ತಾಪವಿಟ್ಟಿದ್ದು, ಇದನ್ನು ತಿರಸ್ಕರಿಸಿದಕ್ಕಾಗಿ ನಡು ರಸ್ತೆಯಲ್ಲಿಯೇ ಚೂರಿಯಿಂದ ಇರಿದಿದ್ದಾನೆ. ಈ ಸಂದರ್ಭ ನಟಿಯ ಹೊಟ್ಟೆ, ಕೈಗಳಿಗೆ ತೀವ್ರವಾಗಿ ಗಾಯವಾಗಿತ್ತು.

ನಟಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿಯು ಕೃತ್ಯದ ಬಳಿಕ ಆಡಿ ಕಾರಿನ ಮೂಲಕ ತಪ್ಪಿಸಿಕೊಂಡಿದ್ದಾನೆ. ಆರೋಪಿಯನ್ನು ಕುಮಾರ್ ಮಹಿಪಾಲ್ ಸಿಂಗ್ ಎಂದು ಗುರುತಿಸಲಾಗಿದೆ.  ಫೇಸ್ ಬುಕ್ ನಲ್ಲಿ ಫ್ರೆಂಡ್ ಆದ ಬಳಿಕ ಕೆಲ ದಿನಗಳ ಹಿಂದೆ ನಟಿಯನ್ನು ಭೇಟಿ ಮಾಡಿದ್ದ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version