7:00 AM Wednesday 22 - October 2025

‘ನಮ್ಮೂರು ಕೊಟ್ಟಿಗೆಹಾರ’ ವಾಟ್ಸಾಪ್ ವತಿಯಿಂದ ಮೆಸ್ಕಾಂ ಸಿಬ್ಬಂದಿಗೆ ಏಣಿ ಕೊಡುಗೆ!

mescom
09/07/2024

ಕೊಟ್ಟಿಗೆಹಾರ: ‘ನಮ್ಮೂರು ಕೊಟ್ಟಿಗೆಹಾರ’ ವಾಟ್ಸಾಪ್ ಗ್ರೂಪ್ ವತಿಯಿಂದ ಮಲೆನಾಡಿನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ವಿದ್ಯುತ್ ಸೇವೆ ನೀಡುವ ಉದ್ದೇಶದಿಂದ ಉತ್ತಮವಾದ ಅಲುಮಿನಿಯಂ ಏಣಿಯನ್ನು ಕೊಡುಗೆಯಾಗಿ ನೀಡಲಾಯಿತು.

ಗ್ರೂಪ್ ನ ಸದಸ್ಯರಾದ ತನು,  ಸಂಜಯ್ ಗೌಡ ಮಾತನಾಡಿ’ ಕೊಟ್ಟಿಗೆಹಾರ ಮಳೆಗಾಲದಲ್ಲಿ ವಿದ್ಯುತ್ ಸೌಲಭ್ಯದಿಂದ ವಂಚಿತವಾಗುತ್ತದೆ. ವಿದ್ಯುತ್ ಸಿಬ್ಬಂದಿಗಳು ಕೂಡ ಮಳೆಗಾಲದಲ್ಲಿ ಕಂಬ ಹತ್ತಿ ಕಾರ್ಯ ನಿರ್ವಹಿಸುವುದು ಕಷ್ಟಸಾಧ್ಯ. ಹಾಗಾಗಿ ಗ್ರೂಪಿನ ಸದಸ್ಯರು ವಂತಿಗೆ ಹಾಕಿ ರೂ 3,600 ಬೆಲೆ ಬಾಳುವ ಇಪ್ಪತ್ತು ಅಡಿ ಏಣಿಯನ್ನು ಸಿಬ್ಬಂದಿಗೆ ನೀಡಿದ್ದೇವೆ. ಇದರ ಸಹಾಯದಿಂದ ಕಂಬ ಹತ್ತಿ ವಿದ್ಯುತ್ ದುರಸ್ತಿ ಮಾಡಲು ಸಿಬ್ಬಂದಿಗಳಿಗೆ ಸಹಕಾರಿಯಾಗಿದೆ’ಎಂದರು.

ಈ ಸಂದರ್ಭದಲ್ಲಿ ಮೆಸ್ಕಾಂ ಸಿಬ್ಬಂದಿಗಳಾದ ದೀಪಕ್, ಪವನ್, ಶಶಿ, ಮುಖಂಡರಾದ ತನು ಕೊಟ್ಟಿಗೆಹಾರ, ಸಂಜಯ್, ಕೃಷ್ಣಮೂರ್ತಿ, ವೀರಪ್ಪಗೌಡ, ರಾಜು ರೆಡ್ ಚೆಲ್ಲಿ, ಸಂತೋಷ್ ಅತ್ತಿಗೆರೆ, ನಾಗರಾಜ್ ಆಚಾರ್ಯ, ಅನಿಲ್ ಅತ್ತಿಗೆರೆ, ಎ.ಆರ್.ಅಭಿಲಾಷ್, ರಘು ಅತ್ತಿಗೆರೆ, ಜೀಯಾ, ವಿಕ್ರಂಗೌಡ, ಆದರ್ಶ್ ತರುವೆ, ಬೇಬಿ ಪಿ.ಜಿ., ಅಶೋಕ್ ಮಲ್ಲಂದೂರು, ಪ್ರಶಾಂತ್ ತರುವೆ, ಎ.ಎಂ.ಹಸೇನ, ಬಿ.ಎಂ.ಸುರಕ್ಷಿತ್ ಮತ್ತಿತರರು ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version