2:15 PM Wednesday 10 - December 2025

ಲಕ್ಷ್ಮೀ ಬಾಂಬ್ ಬ್ಯಾನ್ ಮಾಡಲು ಹಿಂದೂ ಮಹಾಸಭಾ ಆಗ್ರಹ!

28/10/2020

ಮಂಗಳೂರು: ಲಕ್ಷ್ಮೀ ಬಾಂಬ್ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡುವ ಲವ್ ಜಿಹಾದ್ ನ ಅಂಶವಿದೆ. ಹೀಗಾಗಿ ಸಿನಿಮಾ ನಿಷೇಧ ಮಾಡಬೇಕು ಎಂಧು ಹಿಂದೂ ಮಹಾಸಭಾ ಆಗ್ರಹಿಸಿದೆ.


ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀ ಬಾಂಬ್ ಪ್ರದರ್ಶನ ಮಾಡುವುದರ ಹಿಂದೆ ಹಿಂದೂ ಸಮಾಜದ ಶಕ್ತಿಯನ್ನು ಕುಗ್ಗಿಸುವ ಸಂಚು ಅಡಗಿದೆ ಎಂದು ಹಿಂದೂ ಮಹಾಸಭಾ ಸಂಸದೀಯ ಕಾರ್ಯದರ್ಶಿ ಧರ್ಮೇಂದ್ರ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.


ಚಿತ್ರದಲ್ಲಿ ಹಿಂದೂ ಯುವತಿ ಮತ್ತು ಮುಸ್ಲಿಮ್ ಯುವಕನ ಸಂಬಂಧವನ್ನು ತೋರಿಸಲಾಗಿದೆ. ಹೀಗಾಗಿ ಈ ಚಿತ್ರವನ್ನು ನಿಷೇಧಿಸಬೇಕು ಎಂದು ಧರ್ಮೇಂದ್ರ ಆಗ್ರಹಿಸಿದರು.


ಇತ್ತೀಚಿನ ಸುದ್ದಿ

Exit mobile version