ಮುಸ್ಲಿಮರು ಮೀಸಲಾತಿಗೆ ಅರ್ಹರಲ್ಲವೇ..? ಸಂವಿಧಾನ ಮತ್ತು ಮೀಸಲಾತಿಯನ್ನು ಕಿತ್ತುಹಾಕಲು ಬಿಜೆಪಿ ಬಯಸಿದೆ ಎಂದ ಲಾಲೂ ಪ್ರಸಾದ್

07/05/2024

ಮುಸ್ಲಿಮರು ಮೀಸಲಾತಿಗೆ ಅರ್ಹರಲ್ಲವೇ..? ಬಿಜೆಪಿ ಇಡೀ ಸಂವಿಧಾನವನ್ನೇ ನಾಶ ಮಾಡಲು ಹೊರಟಿದೆ. ಸಂವಿಧಾನ ಹೇಳುವ ಮೀಸಲಾತಿಗೆ ಬಿಜೆಪಿ ವಿರುದ್ಧವಾಗಿದೆ.

ಆದ್ದರಿಂದಲೇ ಸಂವಿಧಾನ ಮತ್ತು ಮೀಸಲಾತಿಯನ್ನು ಕಿತ್ತುಹಾಕಲು ಅದು ಬಯಸಿದೆ ಎಂದು ಆರ್ ಜೆ ಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.
ಬಿಜೆಪಿ ಮುಸ್ಲಿಂ ಮೀಸಲಾತಿಯನ್ನು ತೀವ್ರವಾಗಿ ವಿರೋಧಿಸುತ್ತಿದೆ. ಈ ಬಾರಿಯ ಚುನಾವಣಾ ಪ್ರಚಾರದುದ್ದಕ್ಕೂ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರು ಈ ಬಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ದಲಿತರು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲಾಗುತ್ತಿದೆ ಎಂಬ ರೀತಿಯಲ್ಲಿ ಕಾಂಗ್ರೆಸ್ಸಿನ ಮೇಲೆ ಆರೋಪವನ್ನು ಹೊರಿಸುತ್ತಿದ್ದಾರೆ.

ಈಗಾಗಲೇ ಬಿಜೆಪಿಯ ಮೇಲೆ ಮೀಸಲಾತಿ ವಿರೋಧಿ ಪಕ್ಷ ಎಂಬ ಹಣೆ ಪಟ್ಟಿಯಯೂ ಇದೆ. ಈ ನಡುವೆ ಮುಸ್ಲಿಂ ಮೀಸಲಾತಿಯನ್ನು ಅದು ವಿರೋಧಿಸುತ್ತಿರುವುದರಿಂದ ಅಂತಿಮವಾಗಿ ಅದರ ಉದ್ದೇಶ ಸಂವಿಧಾನವನ್ನು ನಾಶ ಮಾಡುವುದು ಎಂಬ ರೀತಿಯಲ್ಲಿ ಲಾಲೂ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version