11:55 AM Thursday 21 - August 2025

ಕುಮಾರಸ್ವಾಮಿ ಜೊತೆ ಸಿದ್ದರಾಮಯ್ಯನವರು ದತ್ತಪೀಠಕ್ಕೆ ಬರಲಿ: ಸಿ.ಟಿ. ರವಿ ಮನವಿ

c t ravi
21/11/2023

ಚಿಕ್ಕಮಗಳೂರು: ಕುಮಾರಸ್ವಾಮಿ ಜೊತೆ ಸಿದ್ದರಾಮಯ್ಯನವರು ದತ್ತಪೀಠಕ್ಕೆ ಬರಲಿ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಮಾಜಿ ಶಾಸಕ ಸಿ.ಟಿ. ರವಿ ಮನವಿ ಮಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಹಿಂದು ಎಂದು ಹೇಳಿಕೊಳ್ಳಲು ಗರ್ವ ಪಡಬೇಕು, ಸಮಾಜ ಇದನ್ನೇ ಕೇಳೋದು . ಮಾಜಿ ಸಿಎಂ ಹೆಚ್ಡಿಕೆ ಹೇಳಿಕೆ ಸಿಎಂ ಸಿದ್ದರಾಮಯ್ಯನವರಿಗೂ ಮಾದರಿ .  ನಾನು ಹಿಂದೂ ಅಲ್ವಾ, ನನ್ನ ಹೆಸರಲ್ಲೇ ಸಿದ್ರಾಮ ಇದ್ದಾನೆ ಎಂದಿದ್ದಾರೆ.  ನೀವು ಮಾಲೆ ಹಾಕಿಕೊಂಡು ಬಂದರೆ ನಮ್ಮ ಸತ್ಯದ ಹೋರಾಟಕ್ಕೆ ಬಲ ಬರಲಿದೆ ಎಂದರು.

ನೀವು ಮಾಲೆ ಹಾಕಿದೆ ಮೇಲೆ ಜಮೀರ್ ಅವರು ಮಾಲೆ ಹಾಕೇ ಹಾಕುತ್ತಾರೆ. ಆಗ 5 ದಶಕದ ಹೋರಾಟಕ್ಕೆ ಬಲ ಬರುತ್ತೆ, ಸತ್ಯವನ್ನ ಎತ್ತಿ ಹಿಡಿದಂತಾಗುತ್ತೆ. ನಮ್ಮ ಧರ್ಮದ ಪ್ರಕಾರ ನಡೆದುಕೊಳ್ಳಲು ಯಾರಿಗೆ ಏಕೆ ಹೆದರಬೇಕು?  ಯಾರೂ ಎಲೆಕ್ಷನ್ ಟೈಂ ಹಿಂದೂಗಳಾಗಬಾರದು, ಜೀವನ ಪರ್ಯಂತ ಹಿಂದೂಗಳಾಬೇಕು. ಹಿಂದುತ್ವದ ವಿಚಾರ ಬಂದಾಗ ಹಿಂದೆ ನೋಡಲೇಬಾರದು, ಮುಂದಕ್ಕೆ ನೋಡಬೇಕು. ಸಿದ್ದರಾಮಯ್ಯನವರು ಬರಲಿ ಎಂದು ಮನವಿ ಮಾಡುತ್ತೇನೆ.

ಇತ್ತೀಚಿನ ಸುದ್ದಿ

Exit mobile version