ಪ್ರಿಯಾಂಕ್ ಖರ್ಗೆ ಭವಿಷ್ಯ ಹೇಳುವ ಕಾಯಕ ಮುಂದುವರೆಸಲಿ: ಸಿ.ಟಿ.ರವಿ ವ್ಯಂಗ್ಯ

ಚಿಕ್ಕಮಗಳೂರು: ಸಿ.ಟಿ.ರವಿ ಸದ್ಯದಲ್ಲೇ ಬೆಳಗಾವಿ ಟೀಂ ಸೇರ್ತಾರೆ ಅನ್ನೋ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಪರಿಷತ್ ಸದಸ್ಯ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಪ್ರಿಯಾಂಕ್ ಖರ್ಗೆ ಯಾವಾಗ ಭವಿಷ್ಯ ಹೇಳಲು ಶುರುವಾದ್ರು ಗೊತ್ತಿಲ್ಲ, ತಮ್ಮ ಭವಿಷ್ಯದ ಮಾತುಗಳನ್ನ ರಾಹುಲ್ ಗಾಂಧಿ ಬಗ್ಗೆಯೂ ಹೇಳಲು ಶುರು ಮಾಡಿ ಬೆಳಕು ಚೆಲ್ಲಲಿ ಅಂತ ಅವರು ಹೇಳಿದರು.
ರಾಹುಲ್ ಗಾಂಧಿ ಇಂತಹಾ ಭವಿಷ್ಯಕಾರರ ಬಗ್ಗೆ ಆಶಾಭಾವನೆಯಿಂದ ನೋಡ್ತಿರ್ತಾರೆ, ಕಳೆದ 10 ವರ್ಷದಿಂದ ಭವಿಷ್ಯವೇ ಇಲ್ಲದೆ ಒದ್ದಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ತಮ್ಮ ಪ್ರತಿಭೆಯನ್ನ ರಾಹುಲ್ ಗಾಂಧಿ ಬಗ್ಗೆ ಹೇಳಬೇಕು. ಆಗ ಅವರು ಅವರ ಆಸ್ಥಾನದ ಜ್ಯೋತಿಷಿಯೂ ಆಗಬಹುದು ಎಂದು ಸಿ.ಟಿ.ರವಿ ತಿರುಗೇಟು ನೀಡಿದರು.
ಖರ್ಗೆ ಅವರು ಭವಿಷ್ಯ ಹೇಳುವ ಮೂಲಕ ತಮ್ಮ ಕಾಯಕ ಮುಂದುವರೆಸಲಿ ಎಂದು ಇದೇ ವೇಳೆ ಸಿ.ಟಿ.ರವಿ ಹಾರೈಕೆ ಮಾಡಿ ವ್ಯಂಗ್ಯವಾಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth