3:15 PM Wednesday 22 - October 2025

ಲಿಕ್ಕರ್ ಮಾಫಿಯಾ | ವಾರೆಂಟ್ ನೀಡಲು ಹೋದ ಕಾನ್ಸ್ ಟೇಬಲ್ ನ ಬರ್ಬರ ಹತ್ಯೆ

10/02/2021

ಲಕ್ನೋ:  ಲಿಕ್ಕರ್ ಮಾಫಿಯಾ ಮಟ್ಟ ಹಾಕಲು ಹೋದ ಕಾನ್ಸ್ ಟೇಬಲ್ ನ್ನು ಹತ್ಯೆ ಮಾಡಿದ ಘಟನೆ  ಉತ್ತರ ಪ್ರದೇಶದ ಕಾಸ್ ಗಂಜ್ ಜಿಲ್ಲೆಯಲ್ಲಿ ನಡೆದಿದೆ.  ಘಟನೆಯ ವೇಳೆ ಪ್ರಕರಣದ ಪ್ರಮುಖ ಆರೋಪಿಯನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಿಕ್ಕರ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗೆ ವಾರೆಂಟ್ ನೀಡಲು ಪೊಲೀಸ್ ತಂಡ ಕಾಸ್ ಗಂಜ್ ಜಿಲ್ಲೆ ಗ್ರಾಮವೊಂದಕ್ಕೆ ತೆರಳಿದ್ದು, ಈ ವೇಳೆ ಈ ಘಟನೆ ನಡೆದಿದೆ.

ವಾರೆಂಟ್ ನೀಡಲು ಹೋದ ಕಾನ್ಸ್ ಟೇಬಲ್ ನ್ನು ಹತ್ಯೆ ಮಾಡಿದ ಆರೋಪಿಗಳು ಸಬ್ ಇನ್ಸ್ ಪೆಕ್ಟರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಸೊಂಕರ್ ತಿಳಿಸಿದ್ದಾರೆ.

ಕಾನ್ಸ್ ಟೇಬಲ್  ದೇವೇಂದ್ರ ಮೃತಪಟ್ಟವರಾಗಿದ್ದು, ಎಸ್ ಐ ಅಶೋಕ್ ಕುಮಾರ್ ಗೆ ಗಂಭೀರವಾಗಿ ಗಾಯವಾಗಿದೆ. ಗೂಂಡಾಗಳು ಪೊಲೀಸರನ್ನು ಹಿಡಿದು ವಿವಸ್ತ್ರಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version