4:55 AM Wednesday 17 - December 2025

ಸಿನಿಮೀಯ ರೀತಿಯಲ್ಲಿ ನಡೀತು ಮರ್ಡರ್: ಮನೆಗೆ ನುಗ್ಗಿ‌ ದುಷ್ಕರ್ಮಿಗಳಿಂದ ಕಾಂಗ್ರೆಸ್ ಮುಖಂಡನ ಹತ್ಯೆ

19/09/2023

ದುಷ್ಕರ್ಮಿಗಳು ಕಾಂಗ್ರೆಸ್‌ ಮುಖಂಡನನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಪಂಜಾಬ್‌ನ ಮೊಗಾ ಎಂಬಲ್ಲಿ ನಡೆದಿದೆ.
ಮೃತರನ್ನು ಬಲ್ಜಿಂದರ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಈ ಭೀಕರ ಕೊಲೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆ ನಡೆಯುವ ಮೊದಲು ಬಲ್ಜಿಂದರ್‌ ಸಿಂಗ್‌ಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿತ್ತು. ಅಷ್ಟೇ ಅಲ್ಲದೇ, ಆ ವ್ಯಕ್ತಿ ಕೆಲವು ದಾಖಲೆಗಳಿಗೆ ಸಹಿ ಮಾಡುವಂತೆ ವಿನಂತಿಸಿದ್ದಾನೆ. ಇದು ಮಾಮೂಲಿ ವಿಷಯವೆಂದು ನಂಬಿದ ಬಲ್ಜಿಂದರ್‌ ಸಿಂಗ್‌ ಆತನನ್ನು ಭೇಟಿಯಾಗಲು ತಮ್ಮ ನಿವಾಸದಿಂದ ಹೊರಟಿದ್ದಾರೆ. ಈ ಸಮಯವನ್ನೇ ಕಾಯುತ್ತಿದ್ದ ದುಷ್ಕರ್ಮಿಗಳು ಬಲ್ಜಿಂದರ್‌ ಸಿಂಗ್‌ ಮೇಲೆ ಗುಂಡಿನ ದಾಳಿ ನಡೆಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಎದೆ ಹಾಗೂ ಹೊಟ್ಟೆಗೆ ಗುಂಡು ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಬಲ್ಜಿಂದರ್‌ ಸಿಂಗ್‌ ರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version