2:57 AM Wednesday 20 - August 2025

ಯೂಟ್ಯೂಬ್ ನೋಡಿ ಸೋರೆಕಾಯಿ ಜ್ಯೂಸ್ ಮಾಡಿ ಕುಡಿದ ವ್ಯಕ್ತಿಯ ದಾರುಣ ಸಾವು

Dharmendra
12/11/2022

ಇಂದೋರ್:  ಯೂಟ್ಯೂಬ್ ವಿಡಿಯೋ ನೋಡಿ ಸೋರೆಕಾಯಿ ಜ್ಯೂಸ್ ಮಾಡಿ ಕುಡಿದ ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡು ಸಾವನ್ನಪ್ಪಿದ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಖಂದ್ವಾ ಜಿಲ್ಲೆಯ ಸ್ವರ್ಣಬಾಘ್​ ಕಾಲನಿಯ ನಿವಾಸಿ, ವೃತ್ತಿಯಲ್ಲಿ ಚಾಲಕನಾಗಿರುವ ಧರ್ಮೇಂದ್ರ ಕೊರೊಲೆ (32) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಕೈ ನೋವಿನಿಂದ ಬಳಲುತ್ತಿದ್ದ ಧರ್ಮೇಂದ್ರ ಅವರು ಸಮಸ್ಯೆ ಪರಿಹಾರಕ್ಕಾಗಿ ಯೂಟ್ಯೂಬ್ ವಿಡಿಯೋಗಳ ಮೊರೆ ಹೋಗಿದ್ದಾರೆ. ಯೂಟ್ಯೂಬ್ ನಲ್ಲಿ, ಕಾಡಿನಲ್ಲಿ ಬೆಳೆದ ಬಾಟಲ್ ಸೋರೆಕಾಯಿ ನೋವನ್ನು ಕಡಿಮೆ ಮಾಡುತ್ತದೆ ಎಂದು ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.

ಯೂಟ್ಯೂಬ್ ಮಾಹಿತಿಯಂತೆ ಧರ್ಮೇಂದ್ರ ಕಾಡೊಂದರಲ್ಲಿ ಸೋರೆಕಾಯಿ(Wild Bottle Gourd) ಸಂಗ್ರಹಿಸಿದ್ದರು. ಬಳಿಕ ಅದನ್ನು ಜ್ಯೂಸ್ ಮಾಡಿ ಸೇವಿಸಿದರು. ಜ್ಯೂಸ್ ಮಾಡಿದ ಬೆನ್ನಲ್ಲೇ ಅವರು ವಾಂತಿ ಮತ್ತು ಸುಸ್ತಿನಿಂದ ಬಳಲಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ  ಅವರು ಸಾವನ್ನಪ್ಪಿದ್ದಾರೆ.

ನಗರದಲ್ಲಿ  ಹಲವು ವರ್ಷಗಳಿಂದ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಧರ್ಮೇಂದ್ರ ಕೊರೊಲೆ ವಾಸವಿದ್ದರು. ಘಟನೆ ಸಂಬಂಧ ಕುಟುಂಬಸ್ಥರ ಹೇಳಿಕೆಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಪೋಸ್ಟ್ ಮಾರ್ಟಂ ವರದಿಯ ಬಳಿಕ ಸಾವಿಗೆ ಸ್ಪಷ್ಟ ಕಾರಣಗಳು ಲಭ್ಯವಾಗಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version