8:33 AM Thursday 11 - December 2025

ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ | ಕೊವಿಡ್  ಲಸಿಕೆ ಪಡೆದರೆ ಮದ್ಯ ಸೇವಿಸುವಂತಿಲ್ಲ

16/01/2021

ಬೆಂಗಳೂರು: ಕೊರೊನಾ ಲಸಿಕೆ ಸೇವನೆ ಮಾಡಿದವರು ಮದ್ಯ ಸೇವನೆ ಮಾಡಬಾರದು ಎಂದು ಕೊವಿಡ್ ಸಲಹಾ ಸಮಿತಿ ತಜ್ಞರು ಅಭಿಪ್ರಾಯಪಟ್ಟಿದ್ದು,  ಲಸಿಕೆಯ ಎರಡನೇ ಡೋಸ್ ಪಡೆದು 15 ದಿನಗಳವರೆಗೆ ಮದ್ಯ ಸೇವನೆ ಮಾಡಬಾರದು ಎಂದು ಅವರು ಮಾಹಿತಿ ನೀಡಿದ್ದಾರೆ.

ಕೊವಿಡ್ ವಿರುದ್ಧದ ಲಸಿಕೆ ಪಡೆದ ಬಳಿ ಆಹಾರ ಸೇವನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಮದ್ಯ ಸೇವನೆ ಮಾಡಲೇ ಬಾರದು ಎಂದು ತಜ್ಞರು ಹೇಳಿದ್ದಾರೆ.  ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದ ಬಳಿಕ ಅಲರ್ಜಿ ಅಥವಾ ಅನಾರೋಗ್ಯ ಕಂಡು ಬಂದರೆ 2ನೇ ಡೋಸ್ ತೆಗೆದುಕೊಳ್ಳುವುದು ಬೇಡ. ವೈದ್ಯರ ಪರಿಶೀಲನೆಯ ಬಳಿಕ ಎರಡನೇ ಡೋಸ್ ನೀಡಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಲಸಿಕೆ ಪಡೆದ ಬಳಿಕ ಇಂತಹ ಆಹಾರ ಸೇವಿಸ ಬಹುದು, ಇಂತಹ ಆಹಾರ ಸೇವಿಸಬಾರದು ಎಂದೇನೂ ಇಲ್ಲ, ಆದರೆ ಮದ್ಯಸೇವನೆ ಮಾಡಬಾರದು ಎಂದು ತಜ್ಞರ ಸಮಿತಿ ಒತ್ತಿ ಹೇಳಿದೆ.

ಇತ್ತೀಚಿನ ಸುದ್ದಿ

Exit mobile version