11:00 AM Wednesday 15 - October 2025

ನನ್ನ ಮಗಳು ಹುಟ್ಟಿದಾಗಲೇ ಸತ್ತು ಹೋಗಿದ್ದರೆ ಚೆನ್ನಾಗಿತ್ತು ಅಂತ ಅನ್ನಿಸಿತು | ಕಣ್ಣೀರು ಹಾಕಿದ ಸತ್ಯರಾಜ್

12/02/2021

ಬೆಂಗಳೂರು: ನನ್ನ ಮಗಳು ಹುಟ್ಟಿದಾಗಲೇ ಸತ್ತು ಹೋಗಿದ್ದರೆ ಚೆನ್ನಾಗಿತ್ತು ಎಂದು ಅನ್ನಿಸುತ್ತಿದೆ ಎಂದು ಚಿತ್ರ ನಟ ಸತ್ಯಜಿತ್ ಕಣ್ಣೀರು ಹಾಕಿದ್ದು,  ಮಗಳು ತನ್ನ ವಿರುದ್ಧ ದೂರು ನೀಡಿರುವುದರ ವಿರುದ್ಧ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸಕ್ಕರೆ ಕಾಯಿಲೆಗೆ ಇನ್ಸೂಲಿನ್, ಇಂಜೆಕ್ಷನ್ ತೆಗೆದುಕೊಳ್ಳಲು ಹಣ ನೀಡಲಿಲ್ಲ. ಸಂಘ ಸಂಸ್ಥೆಗಳು ಸನ್ಮಾನ ಮಾಡಿದ ಹಣ, ದಾನಿಗಳು ನೀಡಿದ ಹಣದಿಂದ ನಾನು  ಬದುಕಿದ್ದೇನೆ. ಆದರೂ ನನ್ನ ವಿರುದ್ಧ ದೂರು ನೀಡಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಗಳು ಸಾಧನೆ ಮಾಡಲೆಂದು ಹಗಲು ರಾತ್ರಿ ಓದಿಸಿದ್ದೇನೆ. ರಾತ್ರಿ ದುಡಿದು ಸಾಕಿದ್ದೇನೆ. ಮನೆ ಮಾರಿ, ಬಡ್ಡಿ ಸಾಲ ಮಾಡಿ ಹಣ ತಂದು ವಿದೇಶದಲ್ಲಿ ಓದಿಸಿದ್ದೇನೆ. ವಿವಾಹವಾದ ಬಳಿಕ  ನಮಗೆ ಸ್ವಲ್ಪ ಸಹಾಯ ಮಾಡು ಎಂದು ಕೇಳಿದ್ದೇವೆ. ನಾನೇನು ಅಗ್ರಿಮೆಂಟ್  ಮಾಡಿಸಿಕೊಂಡು ಹಣ ಕೊಡು ಎಂದು ಕೇಳಿಲ್ಲ. ಇದಕ್ಕಾಗಿ ನನ್ನ ಹೆಸರಿಗೆ ಕಪ್ಪು ಮಸಿ ಬಳಿಯಲು ಮಗಳು ಷಡ್ಯಂತ್ರ ನಡೆಸಿದ್ದಾರೆ ಎಂದು  ಅವರು ಕಣ್ಣೀರು ಹಾಕಿದ್ದಾರೆ.

ಇತ್ತೀಚಿನ ಸುದ್ದಿ

Exit mobile version