12:50 AM Saturday 23 - August 2025

ಅಂಬೇಡ್ಕರ್ ಜಯಂತಿಯಂದೇ ಮಹಾನಾಯಕ ಪೋಸ್ಟರ್ ಗೆ ಬೆಂಕಿ

mahanayaka
15/04/2021

ಪಿರಿಯಾಪಟ್ಟಣ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫ್ಲೆಕ್ಸ್ ಗೆ ಅಂಬೇಡ್ಕರ್ ಜಯಂತಿಯ ದಿನವೇ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಗ್ರಾಮದ ಪರಿಶಿಷ್ಟ ಕಾಲೊನಿಯ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಅಂಬೇಡ್ಕರ್ ಅವರ 130 ನೇ ಜನ್ಮದಿನ ಕಾರ್ಯಕ್ರಮವನ್ನು ಆಚರಿಸಲು ಮಂಗಳವಾರ ರಾತ್ರಿ ತಯಾರಿ ನಡೆಸಿದ್ದರು. ಈ ವೇಳೆ ಕೆಲವು ಯುವಕರು ಅನುಮಾನಾಸ್ಪದವಾಗಿ ಸ್ಥಳದಲ್ಲಿದ್ದರು ಎಂದು ಹೇಳಲಾಗಿದೆ.

ಬೈಕ್ ನ್ನು ಜೋರಾಗಿ ಶಬ್ಧ ಮಾಡುತ್ತಾ, ಬೀದಿಯಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಅವರನ್ನು ಯಾಕೆ ಈ ರೀತಿ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಸರಿಯಾಗಿ ಉತ್ತರಿಸದೇ ಸ್ಥಳದಿಂದ ತೆರಳಿದ್ದರು ಎಂದು ಹೇಳಲಾಗಿದೆ.

ಆ ಬಳಿಕ ಎಲ್ಲರೂ ಸ್ಥಳದಿಂದ ತೆರಳಿದ್ದು, ಈ ಸಂದರ್ಭ ಅದೇ ಕಿಡಿಗೇಡಿಗಳು ಬ್ಯಾನರ್ ಗೆ ಬೆಂಕಿ ಹಚ್ಚಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅಂಬೇಡ್ಕರ್ ಜಯಂತಿಯಂದು ಗಲಾಟೆ ನಡೆಸಲು ಸಂಚು ರೂಪಿಸಿ, ಅದು ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ಬ್ಯಾನರ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯನ್ನು ಪೊಲೀಸರು ಸೂಕ್ಷ್ಮವಾಗಿ ಪರಿಗಣಿಸಿ ಗ್ರಾಮಸ್ಥರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ

Exit mobile version