8:14 AM Wednesday 15 - October 2025

ಪತಿವ್ರತೆ ಎಂದು ಸಾಬೀತು ಪಡಿಸಲು ಮಹಿಳೆಯನ್ನು ಕುದಿಯುವ ಎಣ್ಣೆಗೆ ಕೈ ಹಾಕಿಸಿದರು!

gujarath
19/07/2021

ಗುಜರಾತ್: ಪತ್ನಿಯ ಶೀಲವನ್ನು ಸಾಬೀತುಪಡಿಸಲು ಕುದಿಯುವ ಎಣ್ಣೆಗೆ ಕೈ ಹಾಕಿಸಿದ ದಾರುಣ ಘಟನೆ ಗುಜರಾತ್ ನಲ್ಲಿ ನಡೆದಿದ್ದು, ರಾಮಾಯಣದಲ್ಲಿ ಸೀತೆಯನ್ನು ಅಗ್ನಿಪರೀಕ್ಷೆಗೆ ಒಡ್ಡಿದ ಪುರಾಣ ಶೈಲಿಯಲ್ಲಿ ಈ ಪರೀಕ್ಷೆಯನ್ನು ನಡೆಸಿ, ಮಹಿಳೆಯ ಕೈ ಸುಟ್ಟಿದ್ದಾರೆ.

ಮಿಂಚಿಯಾ ಎಂಬ ಮಹಿಳೆ ಈ ಪರೀಕ್ಷೆಗೆ ಗುರಿಯಾದ ಮಹಿಳೆಯಾಗಿದ್ದಾಳೆ. ಈಕೆಯ ಪತಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ವ್ಯಕ್ತಿಯೋರ್ವ ನಿರಂತರವಾಗಿ ಮನೆಗೆ ಬರುತ್ತಿದ್ದು, ಆತನ ಜೊತೆಗೆ ಮಿಂಚಿಯಾಗೆ ಅಕ್ರಮ ಸಂಬಂಧ ಇದೆ ಎಂದು ಭೀಮಾನಿ ಎಂಬಾತ ಆರೋಪಿಸಿದ್ದ.

ಈ ಆರೋಪದಿಂದ ಮುಕ್ತರಾಗಬೇಕಾದರೆ, ಕುದಿಯುವ ಎಣ್ಣೆಗೆ ಕೈ ಹಾಕಿ ತನ್ನ ಪತಿವೃತವನ್ನು ಸಾಬೀತುಪಡಿಸ ಬೇಕು ಎಂದು ಅನಾಗರಿಕರು ಸಲಹೆ ಮಾಡಿದ್ದಾರೆ. ಅಂತೆಯೇ ಮಹಿಳೆ ಕುದಿಯುವ ಎಣ್ಣೆಗೆ ಕೈ ಹಾಕಿ ತನ್ನ ಕೈಸುಟ್ಟುಕೊಂಡಿದ್ದಾಳೆ.

ಇನ್ನೂ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,  ಘಟನೆ ಸಂಬಂಧ ಇಬ್ಬರನ್ನು ಬಂಧಿಸಿರುವ ಪೊಲೀಸರು  ವಿವಿಧ ಪ್ರಕರಣಗಳಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ನಾವು ಮದುವೆಯಾಗಿ 27 ವರ್ಷಗಳಾಗಿವೆ. ಆದರೆ ನನಗಿನ್ನೂ ಗರ್ಭ ಧರಿಸಲು ಸಾಧ್ಯವಾಗಿಲ್ಲ. ಹೀಗಾಗಿ ನನ್ನ ಮೇಲೆ ಅನೈತಿಕ ಸಂಬಂಧದ ವದಂತಿ ಹಬ್ಬುತ್ತಿದ್ದಾರೆ. ಇದರಿಂದ ನೊಂದು ನಾನು  ಪತಿವೃತೆ ಎಂದು ಸಾಬೀತುಪಡಿಸಲು ಕುದಿಯುವ ಎಣ್ಣೆಗೆ ಕೈಹಾಕಿದೆ ಎಂದು ನೋವು ತೋಡಿಕೊಂಡಿದ್ದಾಳೆ.

ಇನ್ನಷ್ಟು ಸುದ್ದಿಗಳು:

ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಯತ್ನ

ಸ್ನಾನ ಮಾಡುತ್ತಿದ್ದಾಗ ಮೊಬೈಲ್ ನಲ್ಲಿ ಚಿತ್ರೀಕರಣ: ಯುವತಿ ಕಿರುಚಿದಾಗ ಆರೋಪಿ ಪರಾರಿ

ಮಹಿಳೆಗೆ ಥಳಿಸಿ, ಮೈಮೇಲೆ ಕುಳಿತು ಕಿರುಕುಳ ನೀಡಿದ ಸಬ್ ಇನ್ಸ್ ಪೆಕ್ಟರ್!

ಎರಡು ದಿನಗಳಲ್ಲಿ 16 ಮಂದಿಯ ನಿಗೂಢ ಸಾವು | ಬೆಚ್ಚಿಬಿದ್ದ ಗ್ರಾಮಸ್ಥರು

ಇತ್ತೀಚಿನ ಸುದ್ದಿ

Exit mobile version