6:13 PM Wednesday 20 - August 2025

ಮಾಜಿ ಸಚಿವರ ಸಹೋದರನ ಕಾರು ಡಿಕ್ಕಿಯಾಗಿ ಇಬ್ಬರ ದಾರುಣ ಸಾವು!

car
12/04/2021

ಧಾರವಾಡ:  ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಹೋದರ ಪ್ರಯಾಣಿಸುತ್ತಿದ್ದ ಕಾರು ರಸ್ತೆಯ ಪಕ್ಕದಲ್ಲಿ ನಿಂತಿದ್ದವರ ಮೇಲೆ ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿ ನಾಲ್ವರು ಗಾಯಗೊಂಡ ಘಟನೆ ಬೆಳಗಾವಿ ರಸ್ತೆಯ ಕೆವಿಜಿಬಿ ಬ್ಯಾಂಕ್ ಬಳಿಯಲ್ಲಿ ನಡೆದಿದೆ.

ವಿನಯ್ ಕುಲಕರ್ಣಿ ಸಹೋದರ ವಿಜಯ್​ ಕುಲಕರ್ಣಿ ಪ್ರಯಾಣಿಸುತ್ತಿದ್ದ ಕಾರು ಐದಾರು ಬೈಕ್​ ಗಳಿಗೆ ಡಿಕ್ಕಿಯಾಗಿ, ರಸ್ತೆಯ ಬದಿಯಲ್ಲಿದ್ದವರ ಮೇಲೆ ಕೂಡ ಹರಿದಿದ್ದು, ಪರಿಣಾಮವಾಗಿ ಶೇಖರ್ ಹಾಗೂ ಚರಣ್ ಎಂಬ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಅಪಘಾತದ ವೇಳೆ ಸಾರ್ವಜನಿಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿಜಯ್ ಕುಲಕರ್ಣಿ ಬೇರೆ ವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version