8:15 AM Friday 11 - September 2026

ತಟ್ಟೆ-ಲೋಟ ಬಾರಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ!

sarige noukara
12/04/2021

ಮೈಸೂರು: ರಾಜ್ಯ ಸಾರಿಗೆ ನೌಕರರ ಮುಷ್ಕರ ಮುಂದುವರಿದಿದ್ದು, ಈ ನಡುವೆ ಇಂದು ನೌಕರರು ಹಾಗೂ ಮಹಿಳೆಯರು ತಟ್ಟೆ-ಲೋಟ ಬಾರಿಸಿ ಮೈಸೂರಿನ ಗಾಂಧಿ ವೃತ್ತದ ಬಳಿಯಲ್ಲಿ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಈಡೇರಿಕೆಗೆ ಮನವಿ ಮಾಡಿದರು.

ವಿವಿಧ ಬೇಡಿಕೆ ಈಡೇರಿಸುವಂತೆ ಕಳೆದ 6 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ, ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿದೆ. ನೀಡಿದ ಭರವಸೆ ಈಡೇರಿಸದೇ ವಂಚನೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡರು.

ಪ್ರತಿಭಟನೆ ನಿರತ ಯಾಸ್ಮಿನ್ ಬಾನು ಎಂಬವರು ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ 3 ತಿಂಗಳಿನಿಂದ ನನ್ನ ಪತಿಗೆ ಸಂಬಳವಾಗಿಲ್ಲ. ಸರ್ಕಾರ ಆಶ್ವಾಸನೆ ಕೊಟ್ಟಂತೆ ಬೇಡಿಕೆ ಈಡೇರಿಸಿಲ್ಲ ಎಂದು ನೋವು ತೋಡಿಕೊಂಡರು.

ಮೆಕ್ಯಾನಿಕ್​ ಪರಶುರಾಮ್ ಮಾತನಾಡಿ, ರಾಜ್ಯ ಸರ್ಕಾರ 18 ಸಾವಿರ ಸಂಬಳ ನೀಡುತ್ತದೆ. ಹೀಗಾದರೆ ಸಂಸಾರ ಮಾಡುವುದು ಹೇಗೆ? ನಮ್ಮ ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version