ಚಿತ್ರ ನಟ ಮಿಮಿಕ್ರಿ ಕಲಾವಿದ ಹೊಟೇಲ್ ನಲ್ಲಿ ಶವವಾಗಿ ಪತ್ತೆ!

Kalabhavan Navas
02/08/2025

ಕೊಚ್ಚಿ: ಮಲಯಾಳಂ ನಟ ಹಾಗೂ ಮಿಮಿಕ್ರಿ ಕಲಾವಿದ ಕಲಾಭವನ್ ನವಾಸ್(51) ಹೊಟೇಲ್ ವೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚೊಟ್ಟನಿಕ್ಕರದಲ್ಲಿ ನಡೆದಿದೆ.

ಸಿನಿಮಾ ಚಿತ್ರೀಕರಣ ನಿಮಿತ್ತ ಚೊಟ್ಟನಿಕ್ಕರಕ್ಕೆ ಬಂದಿದ್ದ ಕಲಾಭವನ್ ನವಾಸ್‌(Kalabhavan Navas) ಅವರು ಹೋಟೆಲ್‌ನಲ್ಲಿ ತಂಗಿದ್ದರು. ಹೆಚ್ಚು ಹೊತ್ತು ರೂಮ್‌ ನಿಂದ ಹೊರದ ಹಿನ್ನೆಲೆ ಅನುಮಾನಗೊಂಡು ಹೋಟೆಲ್ ಸಿಬ್ಬಂದಿ ರೂಮ್‌ ಗೆ ಹೋಗಿ ನೀಡಿದಾಗ ನವಾಸ್‌ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಾಭವನ್ ನವಾಸ್ ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಲಾಭವನ್ ನವಾಸ್ ಅವರು ಮಲಯಾಳಂ ಚಿತ್ರರಂಗದಲ್ಲಿ ಮಿಮಿಕ್ರಿ ಕಲಾವಿದ, ಹಿನ್ನೆಲೆ ಗಾಯಕ ಹಾಗೂ ನಟರಾಗಿ ಗುರುತಿಸಿಕೊಂಡಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version