2:40 AM Thursday 16 - October 2025

ಚುನಾವಣೆ ಮುಗಿಯುವ ವೇಳೆ ಮಮತಾ ಜೈಶ್ರೀರಾಮ್ ಜಪಿಸುತ್ತಾರೆ | ಅಮಿತ್ ಶಾ

11/02/2021

ಕೂಚ್ ಬಿಹಾರ್: ‘ಜೈ ಶ್ರೀ ರಾಮ್’ ಘೋಷಣೆ ಕೂಗಿದರೆ ಮಮತಾ ಬ್ಯಾನರ್ಜಿ ಕೋಪ ಮಾಡಿಕೊಳ್ಳುತ್ತಾರೆ, ಆದರೆ ವಿಧಾನಸಭಾ ಚುನಾವಣೆ ಮುಗಿಯುವ ಹೊತ್ತಿಗೆ ಸ್ವತಃ ಅವರೇ ಜೈ ಶ್ರೀರಾಮ್ ಜಪಿಸಲು ಪ್ರಾರಂಭಿಸುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಇಂದು ಪಶ್ಚಿಮ ಬಂಗಾಳದ ಕೂಚ್‌ಬಿಹಾರ್‌ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರವನ್ನು ಕಿತ್ತುಹಾಕುತ್ತದೆ ಮತ್ತು 5 ವರ್ಷಗಳಲ್ಲಿ ‘ಸೋನಾರ್ ಬಾಂಗ್ಲಾ’ ಮಾಡಲಿದೆ ಎಂದರು.

ಮುಂಬರುವ ವಿಧಾನಸಭೆ ಚುನಾವಣೆಯೂ ನರೇಂದ್ರ ಮೋದಿ ಸರ್ಕಾರದ “ವಿಕಾಸ್ (ಅಭಿವೃದ್ಧಿ) ಮಾದರಿ” ಮತ್ತು ಮಮತಾ ಬ್ಯಾನರ್ಜಿಯವರ “ವಿನಾಶ್(ವಿನಾಶ) ಮಾದರಿ” ನಡುವಿನ ಸ್ಪರ್ಧೆಯಾಗಿದೆ ಎಂದು ಅಮಿತ್ ಶಾ ಇದೇ ಸಂದರ್ಭದಲ್ಲಿ ಹೇಳಿದರು.

ಇತ್ತೀಚಿನ ಸುದ್ದಿ

Exit mobile version