3:48 AM Wednesday 17 - September 2025

ಪತ್ನಿಗೆ ಡ್ರಗ್ಸ್ ನೀಡಿ ಸ್ನೇಹಿತರಿಂದಲೇ ಅತ್ಯಾಚಾರ ಮಾಡಿಸಿದ ಪತಿ..!

23/06/2023

ತನ್ನ ಪತ್ನಿಗೆ ದಿನಾಲೂ ಡ್ರಗ್ಸ್​ ನೀಡಿ ಆಕೆಯನ್ನು ಮಲಗಿಸಿ ಆ ಸಮಯದಲ್ಲಿ ಸ್ನೇಹಿತರನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರ ಮಾಡಿಸಿ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಫ್ರಾನ್ಸ್​ನಲ್ಲಿ ನಡೆದಿದೆ.

ಈ ವ್ಯಕ್ತಿಯು ಇದುವರೆಗೆ 51 ವಿಡಿಯೋಗಳನ್ನು ಮಾಡಿದ್ದಾನೆ. ಈ ಅಭ್ಯಾಸವನ್ನು ಕಳೆದ 10 ವರ್ಷಗಳಿಂದ ಆತ ಮುಂದುವರೆಸಿಕೊಂಡು ಬಂದಿದ್ದ. 26 ರಿಂದ 73 ವರ್ಷದೊಳಗಿನ 51 ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ. ಇದುವರೆಗೆ ಆಕೆಯ ಮೇಲೆ 93 ಬಾರಿ ಅತ್ಯಾಚಾರ ನಡೆದಿದೆ ಎಂದು ಹೇಳಲಾಗಿದೆ.

ಡೊಮಿನಿಕ್ ಎಂಬ ವ್ಯಕ್ತಿ ಊಟದಲ್ಲಿ ಆಂಟಿ ಆಂಗ್ಲೇಶನ್ ಡ್ರಗ್ ಅನ್ನು ಬೆರೆಸಿ ಆಕೆ ಕುಡಿಸಿ ಬಳಿಕ ಅತ್ಯಾಚಾರ ಮಾಡಿಸುತ್ತಿದ್ದ. ಡೊಮಿನಿಕ್ ಎಂಬಾತ ಎಲ್ಲಾ ಅತ್ಯಾಚಾರವನ್ನು ವಿಡಿಯೋ ಮಾಡಿ ಅಬ್ಯುಸಸ್ ಎನ್ನುವ ಫೈಲ್ ​ನಲ್ಲಿ ಯುಎಸ್​ ಬಿ ಡ್ರೈವ್​ ನಲ್ಲಿ ಇಟ್ಟಿದ್ದ ಎಂದು ವರದಿ ಹೇಳಿದೆ.

2011 ರಿಂದ 2020ರ ನಡುವೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ದಂಪತಿಗೆ 3 ಮಕ್ಕಳಿದ್ದಾರೆ. ಮಹಿಳೆಗೆ ಮನೆಯಲ್ಲಿರುವ ಗುಪ್ತ ಕ್ಯಾಮರಾಗಳ ಬಗ್ಗೆ ತಿಳಿದ ಬಳಿಕ ಆಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version