4:19 PM Wednesday 10 - December 2025

ಡೆಲಿವರಿ ಏಜೆಂಟ್ ಹೆಸರಲ್ಲಿ ಬಂದು ಯುವತಿ ಮೇಲೆ ಅತ್ಯಾಚಾರ: ಕೃತ್ಯದ ಬಳಿಕ ಸೆಲ್ಫಿ ತೆಗೆದುಕೊಂಡ ಕಾಮುಕ!

stop rape
04/07/2025

ಪುಣೆ: ಕೊರಿಯರ್ ಡೆಲಿವರಿ ಏಜೆಂಟ್ ಹೆಸರಿನಲ್ಲಿ ಫ್ಲ್ಯಾಟ್‌ ಗೆ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಪುಣೆಯಲ್ಲಿ ನಡೆದಿದೆ.

ಐಟಿ ಉದ್ಯೋಗಿಯಾಗಿರುವ  22 ವರ್ಷದ ಯುವತಿ ನಗರದ ಕಾಲೇಜೊಂದರಲ್ಲಿ ಐಟಿ ವ್ಯಾಸಂಗ ಮಾಡುತ್ತಿದ್ದರು. ಆಕೆಯ ಸಹೋದರ ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಬುಧವಾರ ರಾತ್ರಿ 7.30ರ ಸುಮಾರಿಗೆ ಕೊರಿಯರ್ ಡೆಲಿವರಿ ಏಜೆಂಟ್‌ನಂತೆ ಫ್ಲ್ಯಾಟ್‌ ಗೆ ಬಂದ ಅಪರಿಚಿತ ವ್ಯಕ್ತಿ, ದಾಖಲೆಗಳಿಗೆ ಸಹಿ ಮಾಡಲು ಪೆನ್ ಕೇಳಿದ್ದಾನೆ. ಆಕೆ ಆತನ ಕಡೆಗೆ ತಿರುಗುತ್ತಿದ್ದಂತೆಯೇ ಮನೆಯೊಳಗೆ ಬಂದು ಬಾಗಿಲು ಬಂದ್ ಮಾಡಿ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಪುಣೆ ನಗರದ ಕೊಂಧ್ವಾ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ.  ಅತ್ಯಾಚಾರ ನಡೆಸಿದ ಬಳಿಕ ಆರೋಪಿಯು ಸಂತ್ರಸ್ತೆಯ ಫೋನ್‌ನಲ್ಲಿ ಸೆಲ್ಫಿ ಕೂಡ ಕ್ಲಿಕ್ಕಿಸಿದ್ದಾನೆ, ಅದರಲ್ಲಿ ಆಕೆಯ ಬೆನ್ನು ಮತ್ತು ಅವನ ಮುಖ ಭಾಗಶಃ ಕಾಣಿಸುತ್ತಿದೆ. ಒಂದು ವೇಳೆ ಯಾರಿಗಾದರೂ ಬಾಯ್ಬಿಟ್ಟರೆ ಈ ಫೋಟೋಗಳನ್ನು ವೈರಲ್ ಮಾಡಿರುವುದಾಗಿ ಆಕೆಯ ಫೋನ್ ಗೆ ಬೆದರಿಕೆ ಸಂದೇಶ ಕಳುಹಿಸಿದ್ದಾನೆ.

ಆರೋಪಿಯ ಬಂಧನಕ್ಕಾಗಿ ಪೊಲೀಸರು ತನಿಖೆ  ಆರಂಭಿಸಿದ್ದಾರೆ. ಶಂಕಿತನ ಸ್ಕೆಚ್ ಬಿಡಿಸಲಾಗುತ್ತಿದ್ದು, ಹೌಸಿಂಗ್ ಸೂಸೈಟಿಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64( ಅತ್ಯಾಚಾರಕ್ಕೆ ಶಿಕ್ಷೆ) 352 (2) ಕ್ರಿಮಿನಲ್ ಬೆದರಿಕೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version