8:44 PM Thursday 29 - January 2026

ವಿವಾಹಿತ ಮಹಿಳೆಯ ಜತೆ ವಕೀಲನಿಗೆ ಅಕ್ರಮ ಸಂಬಂಧ: ಗೆಳತಿಯ ಪತಿ, ತಂದೆಯ ಕೊಲೆಗೆ ಸುಫಾರಿ ಕೊಟ್ಟು ಸಿಕ್ಕಿಬಿದ್ದ ಲಾಯರ್

13/01/2025

ಕೊಲ್ಲಲು ಟಾರ್ಗೆಟ್ ಮಾಡಿದ ವ್ಯಕ್ತಿಯ ಬದಲಿಗೆ ಹಿಟ್ ಮ್ಯಾನ್‌ಗಳು ಲಕ್ನೋದಲ್ಲಿ ತಪ್ಪು ವ್ಯಕ್ತಿಯನ್ನು ಟಾರ್ಗೆಟ್ ಮಾಡಿ ಕೊಲೆ ಮಾಡಿದ ಘಟನೆ ನಡೆದಿದೆ. ಮಡೆಗಂಜ್ ಪ್ರದೇಶದಲ್ಲಿ ಟ್ಯಾಕ್ಸಿ ಚಾಲಕ ಮುಹಮ್ಮದ್ ರಿಜ್ವಾನ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಕೊಲೆಗೆ ಸಂಬಂಧಿಸಿದಂತೆ ವಕೀಲರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ವಕೀಲ ಆಫ್ತಾಬ್ ಅಹ್ಮದ್ ತಾನು ಸಂಬಂಧ ಹೊಂದಿದ್ದ ಮಹಿಳೆಯ ತಂದೆ ಮತ್ತು ಪತಿಯನ್ನು ಕೊಲ್ಲಲು ಹಿಟ್ ಮ್ಯಾನ್ ಗಳನ್ನು ನೇಮಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಆದ್ರೆ ಬಾಡಿಗೆ ಹಂತಕರು ಉದ್ದೇಶಿತ ಗುರಿಯ ಬದಲು ಚಾಲಕ ಮುಹಮ್ಮದ್ ರಿಜ್ವಾನ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ.

ಈ ಪ್ರಕರಣದಲ್ಲಿ ಅಫ್ತಾಬ್ ಅಹ್ಮದ್ ಪ್ರಮುಖ ಆರೋಪಿ. ಅವನು ಸಂಬಂಧ ಹೊಂದಿದ್ದ ಮಹಿಳೆಯ ಪತಿ ಮತ್ತು ತಂದೆಯನ್ನು ಕೊಲ್ಲಲು ಬಯಸಿದ್ದನು. ಕೊಲೆ ನಡೆಸಲು ಆರೋಪಿಗಳು ಡಿಸೆಂಬರ್ ೩೦ ರಂದು ಮಡೆಗಂಜ್ ತಲುಪಿದ್ದರು. ಆದರೆ ಅಮಾಯಕ ವ್ಯಕ್ತಿಯನ್ನು ಕೊಂದಿದ್ದಾರೆ. ಕೃತ್ಯಕ್ಕೆ ಬಳಸಿದ ಆಯುಧ, ಬೈಕ್ ಮತ್ತು ಆರೋಪಿಗಳ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ (ಕೇಂದ್ರ) ರವೀನಾ ತ್ಯಾಗಿ ತಿಳಿಸಿದ್ದಾರೆ.

ಈ ಯೋಜನೆಯನ್ನು ಕಾರ್ಯಗತಗೊಳಿಸಲು ಆಫ್ತಾಬ್ ಯಾಸಿರ್ ಎಂಬಾತನನ್ನು ಸಂಪರ್ಕಿಸಿದ್ದನು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಅವನು ಕೃಷ್ಣಕಾಂತ್ ಎಂಬಾತನ ಮೂಲಕ ಕೊಲ್ಲಲು ಪ್ಲ್ಯಾನ್‌ ಮಾಡಿದ್ದಾನೆ. ಇವರಿಬ್ಬರು ತಪ್ಪು ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ನಂತರ ಅವರ ಮತ್ತು ಅಫ್ತಾಬ್ ನಡುವೆ ವಿವಾದ ಉಂಟಾಯಿತು.

ಈ ಕೊಲೆ ಮಾಡಲು 2 ಲಕ್ಷ ರೂ.ಗಳನ್ನು ಪಾವತಿಸಿದ ಅಫ್ತಾಬ್, ಉದ್ದೇಶಿತ ಗುರಿಯನ್ನು ಕೊಲ್ಲಲು ವಿಫಲವಾದ ಕಾರಣ ಉಳಿದ ಮೊತ್ತವನ್ನು ಪಾವತಿಸಲು ನಿರಾಕರಿಸಿದ್ದಾನೆ. ಇದು ತೀವ್ರ ವಿವಾದಕ್ಕೆ ಕಾರಣವಾಯಿತು.
ಆರೋಪಿಗಳಿಂದ ಅಕ್ರಮ ಬಂದೂಕು, 14 ಜೀವಂತ ಗುಂಡುಗಳು, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಮತ್ತು ಮೂರು ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೂವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಡಿಸಿಪಿ ತ್ಯಾಗಿ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version