12:37 AM Thursday 21 - August 2025

ಅಪ್ಪ ಬೈಕ್ ಕೊಡಿಸಲಿಲ್ಲ ಎಂದು ಯುವಕ ಸಾವಿಗೆ ಶರಣು!

vikas
07/12/2024

ದಾವಣಗೆರೆ: ಅಪ್ಪ ಬೈಕ್ ಕೊಡಿಸಲಿಲ್ಲ ಎಂದು ನೊಂದು ಮಗನೊಬ್ಬ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು, ತನ್ನ ಜೀವನ ಕೊನೆಗಾಣಿಸಿದ್ದಾನೆ.

ನ್ಯಾಮತಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.  ವಿಕಾಸ್ ಆರ್.(20) ಸಾವಿಗೆ ಶರಣಾದ ಯುವಕನಾಗಿದ್ದಾನೆ. ಕಳೆದ ಹಲವು ಸಮಯಗಳಿಂದಲೂ ಬೈಕ್ ಕೊಡಿಸಿ ಅಂತ ಪೋಷಕರಿಗೆ ಈತ ಒತ್ತಡ ಹಾಕಿದ್ದ. ಆದರೆ ಹಣದ ಕೊರತೆಯಿಂದ ಬೈಕ್ ಕೊಡಿಸಲು ಪೋಷಕರಿಂದ ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.

ಬೈಕ್ ಕೊಡಿಸದಿರುವ ವಿಚಾರಕ್ಕೆ ವಿಕಾಸ್ ತಂದೆಯ ಮೇಲೆ ಸಿಟ್ಟು ಮಾಡಿಕೊಳ್ಳುತ್ತಿದ್ದ. ಮಾತನಾಡುವುದು ಬಿಟ್ಟಿದ್ದ. ಊಟ ಮಾಡುವುದನ್ನೂ ಬಿಟ್ಟಿದ್ದ. ಮನೆಯನ್ನು ತೊರೆದು ಗ್ರಾಮದ ಸಂಬಂಧಿಕರ ಮನೆಗೆ ತೆರಳಿದ್ದ. ಅಲ್ಲೇ ವಿಷ ಸೇವನೆ ಮಾಡಿ ಸಾವಿಗೆ ಶರಣಾಗಿದ್ದಾನೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version