11:56 PM Wednesday 20 - August 2025

ಐಷಾರಾಮಿ ಜೀವನಕ್ಕಾಗಿ  ಮಂಗಳಮುಖಿ ವೇಷ ಧರಿಸಿದ ವ್ಯಕ್ತಿ ಅರೆಸ್ಟ್!

chethan
15/07/2023

ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ  ವ್ಯಕ್ತಿಯೊಬ್ಬ ಮಂಗಳಮುಖಿ ವೇಷ ಧರಿಸಿ ‌ಪೊಲೀಸರ ಅತಿಥಿಯಾದ ಪ್ರಕರಣ ಬಾಗಲಗುಂಟೆಯಲ್ಲಿ  ನಡೆದಿದೆ.

ಬಂಧನಕ್ಕೊಳಗಾದ ವ್ಯಕ್ತಿಯನ್ನು ಚೇತನ್ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಪತ್ನಿ ಹಾಗೂ ಇತರರಿಗೆ ತಿಳಿಯದಂತೆ ಪ್ರತ್ಯೇಕ ರೂಮ್ ಸಹ ಮಾಡಿದ್ದ. ನಾಗಸಂದ್ರ ಮೆಟ್ರೋ ನಿಲ್ದಾಣದ ಸುತ್ತಾ ಭಿಕ್ಷಾಟನೆ ಮಾಡುತ್ತಿದ್ದ. ಮೆಟ್ರೋದ ಬಿಎಂಆರ್‌ ಸಿಎಲ್ ಜಾಗದಲ್ಲಿ ಶೆಡ್ ನಿರ್ಮಿಸಲು ಮುಂದಾಗಿದ್ದ. ಈ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯರು ಪರಿಶೀಲನೆಗೆ ತೆರಳಿದ್ದಾಗ ಸ್ಥಳೀಯ ಮಹಿಳೆಯರ ಸೀರೆ ಎಳೆದಾಡಿ ವಿಕೃತಿ ಮೆರೆದಿದ್ದ.‌

ಚೇತನ್‍ ನನ್ನು ಹಿಡಿದು ಸ್ಥಳೀಯರು ಥಳಿಸಲು ಮುಂದಾಗಿದ್ದಾರೆ. ಆಗ ಆತನ ಅಸಲಿ ಕತೆ ಬಯಲಾಗಿದೆ. ಬಾಗಲಗುಂಟೆ ಪೊಲೀಸರು  ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಈತ ಬೀದಿಯಲ್ಲಿ ಮಂಗಳಮುಖಿಯಂತೆ ನಟಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ. ಜನ ಹಣ ಕೊಡದಿದ್ದಾಗ ಹೆದರಿಸಿ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ. ಅಲ್ಲದೇ ಮಂಗಳಮುಖಿಯರ ಸಹವಾಸ ಮಾಡಿದ್ದ ಆರೋಪಿ ಅವರೊಂದಿಗೆ ಭಿಕ್ಷಾಟನೆಗೆ ತೆರಳುತ್ತಿದ್ದ ಎಂಬ ವಿಚಾರ ತಿಳಿದು ಬಂದಿದೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version