12:06 AM Saturday 18 - October 2025

ಮಾವನಿಗೆ ಚೂರಿ ಇರಿತವಾದ ಬೆನ್ನಲ್ಲೇ ಅಳಿಯನ ಮೇಲೆ ತಲವಾರು ದಾಳಿ

24/11/2020

ಮಂಗಳೂರು: ನಗರದಲ್ಲಿ ಸೋಮವಾರ ರಾತ್ರಿ ಯುವಕನೋರ್ವನ ಮೇಲೆ ತಲವಾರು ದಾಳಿ ನಡೆದಿದ್ದು, ಕಂದಾವರದಲ್ಲಿ ಇತ್ತೀಚೆಗೆ ಚೂರಿ ಇರಿತಕ್ಕೊಳಗಾದ ವ್ಯಕ್ತಿಯ ಸಂಬಂಧಿಯ ಮೇಲೆ ಈ ತಲವಾರು ದಾಳಿ ನಡೆದಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನೌಶಾದ್(30) ಎಂಬವರ ಮೇಲೆ ನಿನ್ನೆ ರಾತ್ರಿ ಮಂಗಳೂರಿನ ಯುನಿಟಿ ಆಸ್ಪತ್ರೆ ಸಮೀಪದಲ್ಲಿ ತಲವಾರು ದಾಳಿ ನಡೆದಿದೆ.  ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಈ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ನೌಶಾದ್ ಅವರ ಎದೆಯ ಭಾಗಕ್ಕೆ ತಲವಾರಿನಿಂದ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.

ನೌಶಾದ್ ಅವರ ಮಾವ ಅಬ್ದುಲ್ ಅಝೀಜ್ ಎಂಬವರ ಮೇಲೆ ಕಂದಾವರ ಮಸೀದಿ ಬಳಿಯಲ್ಲಿ ಚೂರಿಯಿಂದ ದಾಳಿ ನಡೆಸಲಾಗಿತ್ತು. ಇದೀಗ ನೌಶಾದ್ ಅವರ ಮೇಲೂ ದಾಳಿ ನಡೆಸಲಾಗಿದೆ. ಈ ಎರಡೂ ದಾಳಿಯನ್ನೂ ಒಂದೇ ತಂಡ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿ

Exit mobile version