2:13 AM Wednesday 20 - August 2025

ಪಿ.ಎಸ್.ಐ. ನಿತ್ಯಾನಂದಗೌಡ ವಿರುದ್ಧ ಪತ್ನಿಯಿಂದ ವರದಕ್ಷಿಣೆ, ಸೇರಿದಂತೆ ಹಲವು ಆರೋಪ!

Nithyananda Gowda
20/01/2025

ಚಿಕ್ಕಮಗಳೂರು: ಕಳಸ ಪಿ.ಎಸ್.ಐ. ನಿತ್ಯಾನಂದಗೌಡ ವಿರುದ್ಧ ಪತ್ನಿ ಅಮಿತಾ ಕಳಸ ಠಾಣೆ ವರದಕ್ಷಿಣೆ ಆರೋಪ ಹೊರಿಸಿ ಎಫ್ ಐಆರ್ ದಾಖಲಿಸಿದ್ದಾರೆ. ನಿತ್ಯಾನಂದಗೌಡ 50 ಲಕ್ಷ ಹಣ ಕೇಳಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಿತ್ಯಾನಂದಗೌಡ, ತಂಗಿ, ತಂಗಿ ಗಂಡನಿಂದಲೂ ಹಲ್ಲೆ, ಅವಾಚ್ಯ ಶಬ್ಧಗಳ ಬಳಕೆ ಆರೋಪ ಮಾಡಲಾಗಿದೆ.

ಆತ ಕೆಲಸ ಮಾಡಿರುವ ಠಾಣೆಗಳಲ್ಲಿ ವೈಯಕ್ತಿಕ ಜೀವನದ ಬಗ್ಗೆ ಕೆಟ್ಟ ಅಭಿಪ್ರಾಯವಿದೆ. ಕಷ್ಟ ಅಂತ ಬರುವ ಹಾಗೂ ಪಾಸ್ ಪೋರ್ಟ್ ಗೆ ಬರುವ ಮಹಿಳೆಯರನ್ನ ಮಂಚಕ್ಕೆ ಕರೆಯುತ್ತಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಉಡುಪಿಯ ಕಾಪು ಠಾಣೆಯಲ್ಲಿದ್ದಾಗ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ನಾನು ಆತನ ರೂಂಗೆ ಹೋದಾಗ ಕಾಂಡೋಮ್ ಗಳು ಪತ್ತೆಯಾಗಿದ್ದವು, ಮುಸ್ಲಿಮರು ಪಿ.ಎಸ್.ಐ. ಗೆ ಹೊಡೆಯಲು ಬಂದಾಗ ಎಸ್ಪಿ ಉಳಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕೋಟಾ ಠಾಣೆಯಲ್ಲಿ ಮಹಿಳೆ ನ್ಯಾಯ ಕೊಡಿಸುತ್ತೇನೆ ಎಂದು ದೈಹಿಕವಾಗಿ ಬಳಸಿಕೊಂಡಿದ್ದಾನೆ, ಬೆಂಗಳೂರಿನಲ್ಲೂ ಮಹಿಳೆಯನ್ನ ಮಂಚಕ್ಕೆ ಕರೆದು ಸಿಕ್ಕಿಬಿದ್ದಿದ್ದ, ಆ ಮಹಿಳೆಗೆ 4 ಲಕ್ಷ ಹಣ ಕೊಟ್ಟು ಬಚಾವ್ ಆಗಿದ್ದಾನೆ ಎಂದು ಪತಿಯ ಕಾಮಪುರಾಣವನ್ನ ಎಫ್.ಐ.ಆರ್.ನಲ್ಲಿ ದಾಖಲಿಸಿದ ಸಬ್ ಇನ್ಸ್ ಪೆಕ್ಟರ್ ಪತ್ನಿ ಅಮಿತಾ ದೂರು ದಾಖಲಿಸಿದ್ದಾರೆ. ಸದ್ಯ ಕಳಸ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ನಿತ್ಯಾನಂದ ಗೌಡ ಕಾರ್ಯನಿರ್ವಹಿಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

 

ಇತ್ತೀಚಿನ ಸುದ್ದಿ

Exit mobile version