ಮರದಡಿಯಲ್ಲಿ ನಿಂತಿದ್ದ ಬಾಲಕಿ ಸಿಡಿಲು ಬಡಿದು ಸಾವು!

death
31/07/2022

ಕಲಬುರ್ಗಿ: ಜಿಲ್ಲೆಯ ಕಮಲಾ‍ಪುರ ತಾಲ್ಲೂಕಿನ ಮಳಸಾಪುರ ಗ್ರಾಮದಲ್ಲಿ ಭಾನುವಾರ ಸಿಡಿಲು ಬಡಿದು ಬಾಲಕಿ ಮೃತಪಟ್ಟ ಘಟನೆ ನಡೆದಿದೆ.

ಶೈಲಜಾ ಶರಣಪ್ಪ ಜಮಾದಾರ (17) ಮೃತಪಟ್ಟ ಬಾಲಕಿಯಾಗಿದ್ದಾಳೆ. ಕಮಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಯಾಗಿದ್ದ ಶೈಲಜಾ ರಜೆ ಇದ್ದುದರಿಂದ ಬೆಳಿಗ್ಗೆ ಕಳೆ ಕೀಳಲು ತಂದೆ ಶರಣಪ್ಪ ಜೊತೆ ಹೊಲಕ್ಕೆ ತೆರಳಿದ್ದಳು.

ಮಧ್ಯಾಹ್ನ ಮಳೆಯಾಗುತ್ತಿರುವುದರಿಂದ ಗಿಡದ ಕೆಳಗೆ ಆಸರೆ ಪಡೆದಿದ್ದಳು. ಆಗಲೇ ಸಿಡಿಲು ಎರಗಿದೆ. ಶೈಲಜಾ ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ ಶರಣಪ್ಪ ಅವರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version