6:14 AM Saturday 24 - January 2026

ಪತಿ, ಅತ್ತೆ, ಮಾವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತ್ನಿ | ಪತಿ ಸಾವು

22/10/2020

ಮಂಡ್ಯ: ಮಹಿಳೆಯೊಬ್ಬಳು ತನ್ನ ಪತಿ, ಅತ್ತೆ ಹಾಗೂ ಮಾವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಪರಿಣಾಮವಾಗಿ ಪತಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.

ಕೆ.ಆರ್.ಪೇಟೆ ತಾಲೂಕಿನ ಹೆಮ್ಮಡಹಳ್ಳಿ ಗ್ರಾಮದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ.  ಘಟನೆ ಮೂರು ದಿನಗಳ ಹಿಂದೆ ನಡೆದಿತ್ತು. ಆದರೆ, ಯಾವ ಕಾರಣಕ್ಕಾಗಿ ಮಹಿಳೆ ಮಾರಕಾಸ್ತ್ರಗಳಿಂದ ಪತಿ ಹಾಗೂ ಅತ್ತೆ, ಮಾವನ ಮೇಲೆ ಹಲ್ಲೆ ನಡೆಸಿದ್ದಳು ಎನ್ನುವುದು ತಿಳಿದು ಬಂದಿಲ್ಲ.

ಹತ್ಯೆಗೀಡಾದ ಪತಿಯನ್ನು ನಾಗರಾಜು(46) ಎಂದು ಗುರುತಿಸಲಾಘಿದೆ. ಪತ್ನಿ ನಾಗಮಣಿ ತನ್ನ ಪತಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾಳೆ. ಅತ್ತೆ ಕುಳ್ಳಮ್ಮ(60) ಮಾವ ವೆಂಕಟೇಗೌಡ(67) ಗಂಭೀರವಾಗಿ ಗಾಯಗೊಂಡು ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version