12:20 PM Tuesday 27 - January 2026

ಮತಚಲಾಯಿಸಿದ ಅಂಕ ನಾಯಕ | ಭಿಕ್ಷೆಯಿಂದ ಅಧಿಕಾರದತ್ತ ಸಾಗುತ್ತಾರಾ ಅಂಕ ನಾಯಕ?

27/12/2020

ಮೈಸೂರು: ಇಂದು ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ  ಸ್ಪರ್ಧಿಸಿರುವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬೊಕ್ಕಹಳ್ಳಿ  ಗ್ರಾಮದಲ್ಲಿ ಭಿಕ್ಷುಕರಾಗಿದ್ದ, ಈಗ ಚುನಾವಣಾ ಅಭ್ಯರ್ಥಿಯಾಗಿರುವ ಅಂಕ ನಾಯಕ ಮತದಾನ ಮಾಡಿದರು.

ಗ್ರಾಮ ಪಂಚಾಯಿತಿ ಚುನಾವಣೆಗೆ ಬ್ಲಾಕ್ ನಂಬರ್ 1ರಲ್ಲಿ ಮತದಾನ   ಮಾಡಿದ ಅಂಕನಾಯಕ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ,  ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹೀಗಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸವಿದೆ  ಎಂದರು.

40 ವರ್ಷದ  ವಿಕಲಚೇತನರಾದ   ಅಂಕ ನಾಯಕ ಅವಿವಾಹಿತರಾಗಿದ್ದು, ಗ್ರಾಮದಲ್ಲಿ ಭಿಕ್ಷೆ ಬೇಡುತ್ತಾ ತಮ್ಮ ಜೀವನ ಸಾಗಿಸುತ್ತಿದ್ದರು. ಆಗಾಗ ಊರಿನವರು ಅವರಿಗೆ ಊಟ, ಹಣ ಕೊಡುತ್ತಿದ್ದರು. ಸಾಮಾನ್ಯ ವರ್ಗಕ್ಕೆ ಮೀಸಲಾದ ಕ್ಷೇತ್ರದಿಂದ ಕಣಕ್ಕಿಳಿದಿರುವ ಇವರಿಗೆ ಕ್ಯಾಮರಾ ಚಿಹ್ನೆ ಲಭಿಸಿದೆ.

ಈ ಹಿಂದೆ ಆಯ್ಕೆಯಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯರು  ಸರಿಯಾದ ರೀತಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸದ  ಕಾರಣ  ಆಕ್ರೋಶಗೊಂಡ ಗ್ರಾಮದ ಜನರು ಭಿಕ್ಷುಕ ಅಂಕ ನಾಯಕರನ್ನು  ಚುನಾವಣಾ ಕಣಕ್ಕಿಳಿಸಿ, ಪಕ್ಷ ಬೇಧ ಮರೆತು ಅವರ ಪರವಾಗಿ ಪ್ರಚಾರ ಮಾಡಿದ್ದಾರೆ

ಇತ್ತೀಚಿನ ಸುದ್ದಿ

Exit mobile version