7:24 PM Saturday 18 - October 2025

ಮತಾಂತರ ನಿಷೇಧ ಕಾನೂನಿಗೆ ಬಿಜೆಪಿಯ ಮಿತ್ರ ಪಕ್ಷ ವಿರೋಧ | ಬಲಪಂಥೀಯರ ‘ಲವ್ ಜಿಹಾದ್’ ಪದ ಸೃಷ್ಟಿಗೆ ಬೆಂಬಲ ನೀಡಲ್ಲ ಎಂದ ಪಕ್ಷ

28/12/2020

ನವದೆಹಲಿ: ಲವ್ ಜಿಹಾದ್, ವಿವಾಹಕ್ಕಾಗಿ ಮತಾಂತರ ಕಾನೂನು ಸಮಾಜದಲ್ಲಿ ದ್ವೇಷ ಮೂಡಿಸುತ್ತಿದೆ ಎಂದು ಎನ್ ಡಿಎ ಮಿತ್ರಕೂಟ ಜೆಡಿಯು ಹೇಳಿದ್ದು, ಇಂತಹ ಕಾಯ್ದೆಗಳಿಗೆ ನಮ್ಮ ಪಕ್ಷ ಬೆಂಬಲ ನೀಡುವುದಿಲ್ಲ ಎಂದು ಹೇಳಿದೆ.

 ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಳಿಕ ಮಾತನಾಡಿರುವ ಪಕ್ಷದ ಮುಖಂಡ ಕೆಸಿ ತ್ಯಾಗಿ ಈ ಹೇಳಿಕೆ ನೀಡಿದ್ದಾರೆ. ಲವ್ ಜಿಹಾದ್ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಹಾಗೂ ವಿಭಜನೆಯನ್ನು ಸೃಷ್ಟಿಸಲಾಗುತ್ತಿದೆ. ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಮತಾಂತರಗೊಳಿಸುವುದಕ್ಕಾಗಿ ಪ್ರೀತಿಸುವುದನ್ನು ಲವ್ ಜಿಹಾದ್ ಪದವನ್ನು ಬಲಪಂಥೀಯ ಕಾರ್ಯಕರ್ತರು ಸೃಷ್ಟಿಸಿದ್ದಾರೆ ಎಂದು ಅವರು ಹೇಳಿದರು.

ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ವಯಸ್ಕರಿಗೆ ಇದೆ. ಸಂವಿಧಾನ ಹಾಗೂ ಸಿಆರ್ ಪಿಸಿ ಸ್ವಾತಂತ್ರ್ಯ ನೀಡಿದೆ. ಧರ್ಮ, ಮತಗಳನ್ನು ಅವರ ಇಚ್ಛೆಗೆ ತಕ್ಕಂತೆ ಅನುಸರಿಸುವುದಕ್ಕೆ ಸ್ವಾತಂತ್ರ್ಯ ನೀಡಲಾಗಿದೆ, ಈ ಸ್ವಾತಂತ್ರ್ಯವನ್ನು ರಾಮ್ ಮನೋಹರ್ ಲೋಹಿಯಾ ಆದಿಯಾಗಿ ಸಮಾಜವಾದಿಗಳು ಎಂದಿಗೂ ಎತ್ತಿ ಹಿಡಿದಿದ್ದಾರೆ ಎಂದು ಬಿಜೆಪಿಗೆ ತ್ಯಾಗಿ ತಿರುಗೇಟು ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version