8:08 PM Saturday 18 - October 2025

ಅಡುಗೆ ಅನಿಲ ಬೆಲೆ ಮತ್ತೆ ಏರಿಕೆ: ಸಾರ್ವಜನಿಕರ ಬದುಕು ಸಂಕಷ್ಟದಲ್ಲಿ!

25/02/2021

ದೆಹಲಿ: ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದ್ದು, ಸಿಲಿಂಡರ್ ಬೆಲೆಯಲ್ಲಿ 25 ರೂ.  ಬೆಲೆ ಏರಿಕೆಯಾಗಿದೆ.   ದೆಹಲಿಯಲ್ಲಿ  14.2 ಕೆ.ಜಿ. ಸಿಲಿಂಡರ್ ಬೆಲೆ 794 ಆಗಿದೆ. ಬೆಲೆ ಏರಿಕೆಗೂ ಮೊದಲು  ಸಿಲಿಂಡರ್ ಬೆಲೆ 769 ರೂ ಆಗಿತ್ತು. ಫೆಬ್ರವರಿ ತಿಂಗಳಿನಲ್ಲಿ ಬ್ಯಾಕ್ ಟು ಬ್ಯಾಕ್ 3 ಬಾರಿ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿದ್ದು,  ಸತತ 3ನೇ ಬಾರಿಗೆ ಸಿಲಿಂಡರ್ ಬೆಲೆ ಏರಿಕೆ ಆಗಿದೆ.

ಬೆಂಗಳೂರಿನಲ್ಲಿ  ಅಡುಗೆ ಅನಿಲ ಸಿಲಿಂಡರ್ ಬೆಲೆ 794 ಆಗಿದೆ. ಕೋಲ್ಕತ್ತಾದಲ್ಲಿ  820 ಆಗಿದೆ. ಮುಂಬೈಯಲ್ಲಿ  794 ಆಗಿದ್ದು, ಚೆನ್ನೈನಲ್ಲಿ 810 ಹಾಗೂ ಹೈದರಾಬಾದ್ ನಲ್ಲಿ 846.50 ರೂ ಇದೆ. ಕಳೆದ ಮೂರು ತಿಂಗಳಿನಲ್ಲಿ ಪ್ರತಿ ಸಿಲಿಂಡರ್ ಬೆಲೆ 200ರಷ್ಟು ಏರಿಕೆಯಾಗಿದೆ.

ಡಿಸೆಂಬರ್ ನಲ್ಲಿ 100 ರೂ. ಹೆಚ್ಚಾಗಿತ್ತು. ಜನವರಿ ತಿಂಗಳಿನಲ್ಲಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬಡಲಾವಣೆ ಇರಲಿಲ್ಲ. ಫೆಬ್ರವರಿಯಲ್ಲಿ ಸಿಲಿಂಡರ್ ಬೆಲೆ ಏರಿಕೆಯಾಗುತ್ತಲೇ ಹೋಗುತ್ತಿದೆ. ದೇಶದಲ್ಲಿ ಒಂದೆಡೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಇನ್ನೊಂದೆಡೆ ಜನಸಾಮಾನ್ಯ ಅತ್ಯಾವಶ್ಯಕವಾದ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಆಗುತ್ತಿದೆ. ಇದರಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಇಂದಿನ ಸ್ಥಿತಿಗೆ ಅಂದಿನ ಸರ್ಕಾರ ಕಾರಣ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version