12:22 PM Tuesday 27 - January 2026

‘ಪೊಗರು’ ಸೀನ್ ಕಟ್ ಮಾಡಿದರೂ ಮತ್ತೆ ಸೀನ್ ಕ್ರಿಯೇಟ್ ಮಾಡಿದ ಬ್ರಾಹ್ಮಣ ಮಹಾಸಭಾದ ಮಾಜಿ ಉಪಾಧ್ಯಕ್ಷ

26/02/2021

ಬೆಂಗಳೂರು:  ಯಾರ ಭಾವನೆಗಳಿಗೂ ನೋವಾಗಬಾರದು ಎಂಬ ದೊಡ್ಡ ಮನಸ್ಸಿನಿಂದ ಪೊಗರು ಚಿತ್ರ ತಂಡ ಕೆಲವು ದೃಶ್ಯಗಳನ್ನು ಕತ್ತರಿಸಿ ಪ್ರದರ್ಶನಕ್ಕೆ ಮುಂದಾದರೂ  ಬ್ರಾಹ್ಮಣ ಮಹಾಸಭಾದ ಮಾಜಿ ಉಪಾಧ್ಯಕ್ಷ ಲಕ್ಷೀಕಾಂತ್ ಬಾಯಿಗೆ ಬಂದಂತೆ ಅವಾಚ್ಯ ಶಬ್ದ ಬಳಸಿ ದುರಾಂಹಕಾರ ಪ್ರದರ್ಶಿಸಿ ಚಿತ್ರತಂಡದ ಬಗ್ಗೆ ಮಾತನಾಡಿದ್ದಾರೆ.

ಪೊಗರು ಸಿನಿಮಾದ ನಿರ್ದೇಶಕ ನಂದಕಿಶೋರ್ ಮುಂದೆ ಚಿತ್ರಕಥೆ ಬರೆದವರನ್ನು ಅವಾಚ್ಯವಾಗಿ ನಿಂದಿಸಿರುವ ಲಕ್ಷ್ಮೀಕಾಂತ್, ಅಯೋಗ್ಯ ನನ್ಮಗ, ಸೂ*** ಎಂಬ ಪದ ಬಳಕೆ ಮಾಡಿದ್ದಾರೆ. ಕಥೆಗಳಲ್ಲಿ ಬರುವ ಪಾತ್ರಗಳಿಗೆ ಇಷ್ಟೊಂದು ರಿಯಾಕ್ಟ್ ಮಾಡುವ ಅಗತ್ಯ ಇದೆಯಾ? ಎಂಬ ಪ್ರಶ್ನೆಗಳು ಇದೀಗ ಕೇಳಿ ಬಂದಿದೆ.

ಬ್ರಾಹ್ಮಣ ಎನ್ನುವ ವಿಚಾರವನ್ನು ಇದು ಸಮಾಜದಲ್ಲಿ ಮೇಲೆ ಇರುವಂತದ್ದು, ಅಥವಾ ಶ್ರೇಷ್ಟವಾದದ್ದು ಎಂಬಂತೆ ಮಾತನಾಡಿದ ಅವರು, ಒಬ್ಬ ಬ್ರಾಹ್ಮಣನಿಗೆ ಹೋಗಿ, ಪೂಜೆ ಮಾಡುವವನಿಗೆ ಹೋಗಿ,  ಹೆಗಲ ಮೇಲೆ ಜನಿವಾರದ ಮೇಲೆ ಚಪ್ಪಲಿ ಇಡ್ತಾನೆ ಅವರು. ಸೂ***ಮಗ. ಅವನು ತಂದೆಗೆ ಹುಟ್ಟಿದ್ದಾನೇನ್ರಿ? ಎಂದು ಸುಸಂಸ್ಕೃತ ಪದ ಮಾತನಾಡಿದರು.

ಎಲ್ಲಿಯವರೆಗೆ ನಮ್ಮ ಸಹನೆ ಇರುತ್ತೆ ಟೇಕ್ ಇಟ್ ಫಾರ್ ಗ್ರಾಂಟೆಡ್ ಸಮಾಜ. ನಿಮಗೆ ಸಿಡಿದೆದ್ದರೆ ಖಂಡಿತಾ ನೀವು ನಿರ್ನಾಮ ಆಗಿ ಬಿಡುತ್ತೀರಿ ಎಂದು ಬೆದರಿಕೆ ಹಾಕಿದರು.

ಇತ್ತೀಚಿನ ಸುದ್ದಿ

Exit mobile version