1:37 PM Saturday 13 - September 2025

ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ, ಮಾರಾಟ: ವಿದೇಶಿ ಪ್ರಜೆಯ ಬಂಧನ

dany
21/09/2022

ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ- ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸೆನ್ ಅಪರಾಧ ವಿಭಾಗದ ಪೊಲೀಸರು ಬೆಂಗಳೂರಿನಲ್ಲಿ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಲತ: ರಿಪಬ್ಲಿಕ್ ಆಫ್ ಸೌತ್ ಸೂಡನ್‌ ನ ನಿವಾಸಿ,  ಹಾಲಿ ಬೆಂಗಳೂರಿನ ಗುಂಜುರು ಪಾಳ್ಯದಲ್ಲಿ ವಾಸವಿದ್ದ ಲೂಯಲ್ ಡೇನಿಯಲ್ ಜಸ್ಟೀನ್ ಬೌಲೋ ಯಾನೆ ಡ್ಯಾನಿ ಎಂದು ಗುರುತಿಸಲಾಗಿದೆ.

2022ರ ಜೂನ್ 15ರಂದು ಸಿಸಿಬಿ ಪೊಲೀಸರು ಪಡೀಲ್ ಬಳಿ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ಕು ಜನರನ್ನು ದಸ್ತಗಿರಿ ಮಾಡಿ 125 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು.

ತನಿಖೆ ಮುಂದುವರಿಸಿದ್ದ ಸೆನ್ ಕ್ರೈ ಪೊಲೀಸರು ಈ ಹಿಂದೆ ಆರೋಪಿಗಳಿಗೆ ಮಾದಕ ವಸ್ತುವನ್ನು ಮಾರಾಟ ಮಾಡಿದ್ದ ಆರೋಪಿ ಡ್ಯಾನಿಯನ್ನು ಬೆಂಗಳೂರಿನಲ್ಲಿ ಇಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version