7:51 AM Tuesday 30 - December 2025

ಮಳೆ ಮಧ್ಯೆ ಭದ್ರಾ ಡ್ಯಾಂ ಮೀನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡೋ…!

chikamagalore 3
18/07/2024

ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಲಕ್ಕವಳ್ಳಿಯ ಭದ್ರಾ ಬ್ಯಾಕ್ ವಾಟರ್ ಮೀನಿಗೆ ಫುಲ್ ಡಿಮ್ಯಾಂಡ್ , ಭದ್ರಾ ಬ್ಯಾಕ್ ವಾಟರ್ ನ ಫ್ರೆಶ್ ಮೀನುಗಳಿಗೆ ಎನ್.ಆರ್.ಪುರದಲ್ಲಿ ಜನರು ಮುಗಿ ಬಿದ್ದರು.

ಕೇವಲ ಒಂದೇ ಗಂಟೆಯಲ್ಲಿ ಲಕ್ಷಕ್ಕೂ ಹೆಚ್ಚು ಮೌಲ್ಯದ ಮೀನು ಮಾರಾಟವಾಗಿದೆ. ಎನ್.ಆರ್.ಪುರ ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರವಾಗಿದೆ.

ಭದ್ರಾ ಹಿನ್ನಿರಿನಲ್ಲಿ ಹಿಡಿದ ಕಾಟ್ಲಾ, ಗೌರಿ, ರಘು, ಕೊರವ, ಜಿಲೇಬಿ ಮೀನುಗಳಿಗೆ ಭಯಂಕರ ಬೇಡಿಕೆ ಇತ್ತು. ಮೀನುಗಾರರು ಮೀನನ್ನ ಮಾರುಕಟ್ಟೆಗೆ ತರುತ್ತಿದ್ದಂತೆ ಜನ ಮುಗಿಬಿದ್ದು ಖರೀದಿಗೆ ಮುಂದಾದರು. 10-15 ಕೆ.ಜಿ. ದೊಡ್ಡ ಗಾತ್ರದ ಮೀನುಗಳಿಗೆ ಫುಲ್ ಡಿಮ್ಯಾಂಡ್.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version