ಉತ್ತರ ಪ್ರದೇಶದಲ್ಲಿ ಹಾಲಿನ ಟ್ಯಾಂಕರ್ ಪಲ್ಟಿ; ಹಾಲಿಗಾಗಿ ಪಾತ್ರೆ ಹಿಡಿದು ಓಡಿ ಬಂದ ಸ್ಥಳೀಯರು..!

19/09/2023
ಉತ್ತರ ಪ್ರದೇಶದ ಹಾಪುರ ಎಂಬಲ್ಲಿ ಹಾಲಿನ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಸಾವಿರಾರು ಲೀಟರ್ ಹಾಲು ರಸ್ತೆಯಲ್ಲಿ ಚೆಲ್ಲಿ ಹೋದ ಘಟನೆ ನಡೆದಿದೆ.
ಬಕ್ಷರ್ ಬಳಿ ಈ ಘಟನೆ ನಡೆದಿದ್ದು, ಸಂಪೂರ್ಣ ಲೋಡ್ ಮಾಡಿದ ಹಾಲಿನ ಟ್ಯಾಂಕರ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ರಸ್ತೆಯಲ್ಲಿ ಹಾಲು ಚೆಲ್ಲಿ ಹೋಯಿತು.
ಈ ಘಟನೆ ನಡೆಯುತ್ತಿದ್ದಂತೆ ಪ್ರತ್ಯಕ್ಷದರ್ಶಿಗಳು ಸೋರಿಕೆಯಾಗುತ್ತಿರುವ ಹಾಲನ್ನು ಸಂಗ್ರಹಿಸಲು ಬಾಟಲಿಗಳು, ಬಕೆಟ್ ಗಳು ಮತ್ತು ಇತರ ಪಾತ್ರೆಗಳೊಂದಿಗೆ ಟ್ಯಾಂಕರ್ ಸುತ್ತಲೂ ಜಮಾಯಿಸಿದ ಘಟನೆ ನಡೆಯಿತು.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಅವರು ಕ್ರೇನ್ ಸಹಾಯದಿಂದ ಟ್ಯಾಂಕರ್ ಅನ್ನು ಎಳೆಯುವಲ್ಲಿ ಯಶಸ್ವಿಯಾದರು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.