ಹಳೆಯ ದ್ವೇಷದಿಂದ ಅಂಗಡಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

court
24/01/2023

ಹಳೆಯ ದ್ವೇಷದಿಂದ ದುಷ್ಕರ್ಮಿಗಳು ಅಂಗಡಿ, ವಾಹನಕ್ಕೆ ಬೆಂಕಿ ಹಚ್ಚಿರುವ ಘಟನೆ ಮಂಗಳೂರಲ್ಲಿ ಬೆಳಕಿಗೆ ಬಂದಿದ್ದು, ಈ ಕುರಿತು ಮಂಗಳೂರು ನಗರದ ಬಂದರು ಠಾಣೆಗೆ ದೂರು ನೀಡಲಾಗಿದೆ.

ನಗರದ ಕಾಳಿಕಾಂಬಾ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ವಚನರಾಮ್ ರಾಯ್ಕ್ ಕಳೆದ 7 ವರ್ಷಗಳಿಂದ ಹಾರ್ಡ್‌ವೇರ್ ಮತ್ತು ವುಡನ್ ಮೋಲ್ಡಿಂಗ್ ವ್ಯವಹಾರದ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸೋಮವಾರ ಮುಂಜಾನೆ 3:30ಕ್ಕೆ ಅವರ ಅಂಗಡಿಯ ಮುಂದೆ ನಿಲ್ಲಿಸಿದ್ದ ಟಾಟಾ ಏಸ್ ವಾಹನಕ್ಕೆ ಬೆಂಕಿ ತಗಲಿರುವ ಬಗ್ಗೆ ವ್ಯಕ್ತಿಯೊಬ್ಬರು ಕರೆ ಮಾಡಿ ತಿಳಿಸಿದ್ದಾರೆ.

ವಚನರಾಮ್ ತಕ್ಷಣ ಅಂಗಡಿಗೆ ತೆರಳಿ ನೋಡಿದಾಗ ವಾಹನ ಮತ್ತು ಅಂಗಡಿಯಲ್ಲಿ ಬೆಂಕಿ ಕಾಣಿಸುತ್ತಿತ್ತು. ಸಿಸಿ ಕ್ಯಾಮರಾದ ಫೂಟೇಜ್ ಪರಿಶೀಲಿಸಿದಾಗ ವಾಹನ ಮತ್ತು ಅಂಗಡಿಗೆ ಬಿರಾಸ್ ಎಂಬಾತ ಬೆಂಕಿ ಕೊಡುತ್ತಿರುವುದು ಕಂಡುಬಂದಿದೆ.

ಅಂಗಡಿಯ ಕಟ್ಟಡದ 3ನೇ ಮಳಿಗೆಯಲ್ಲಿ ವಾಸವಾಗಿದ್ದ ಬಿರಾಸ್ ಸರಿಯಾಗಿ ಬಾಡಿಗೆ ನೀಡುತ್ತಿರಲಿಲ್ಲ. ಬಾಡಿಗೆ ಕೇಳಿದ್ದ ದ್ವೇಷದಿಂದ ಉದ್ದೇಶಪೂರ್ವಕವಾಗಿ ಅಂಗಡಿ ಮತ್ತು ವಾಹನಕ್ಕೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಸುಮಾರು 10-15 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳಿಗೆ ಮತ್ತು 7 ಲಕ್ಷ ರೂಪಾಯಿ ಮೌಲ್ಯದ ವಾಹನಕ್ಕೆ ಹಾನಿಯಾಗಿದೆ ಎಂದು ದೂರು ನೀಡಲಾಗಿದೆ. ಪೊಲೀಸ್ ತನಿಖೆ ನಡೆಯುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version