1:04 AM Wednesday 22 - October 2025

ಅಟ್ಯಾಕ್: ರಿಕ್ಷಾದಲ್ಲಿ ಹೋಗುತ್ತಿದ್ದ ಶಿಕ್ಷಕಿ ಮೇಲೆ ದಾಳಿ: ಐಫೋನ್ ಕಸಿದು ಮುಸುಕುಧಾರಿಗಳು ಎಸ್ಕೇಪ್

14/08/2023

ಶಿಕ್ಷಕಿಯೊಬ್ಬರು ರಿಕ್ಷಾದಲ್ಲಿ ಹೋಗುತ್ತಿದ್ದಾಗ ಮುಸುಕುಧಾರಿಗಳು ಅವರಿಂದ ಐಫೋನ್ ಕಸಿದುಕೊಂಡು ಆಟೋದಿಂದ ಶಿಕ್ಷಕಿಯನ್ನು ಹೊರದಬ್ಬಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಶಿಕ್ಷಕಿಗೆ ಗಂಭೀರ ಗಾಯಗಳಾಗಿವೆ. ಮುಸುಕುಧಾರಿಗಳು ಶಿಕ್ಷಕಿಯ ಮೊಬೈಲ್ ಕಸಿಯಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದಿದ್ದಾಗ ಆಟೋದಿಂದ ಅವರನ್ನು ಎಳೆದು ರಸ್ತೆಗೆ ಹಾಕಿದ್ದಾರೆ. ಶಿಕ್ಷಕಿ ಪ್ರಜ್ಞೆ ತಪ್ಪಿ ಬಿದ್ದಾಗ ಮೊಬೈಲ್ ಕದ್ದು ಪರಾರಿಯಾಗಿದ್ದಾರೆ. ಶಿಕ್ಷಕಿಯ ಮೂಗು ಮುರಿದಿದ್ದು, ಹಲವೆಡೆ ಗಂಭೀರ ಗಾಯಗಳಾಗಿವೆ.

ಶಿಕ್ಷಕಿ ಯೋವಿಕಾ ಡಿಯೋಲಿ ರಸ್ತೆಯಲ್ಲಿ ಕುಟುಂಬದವರೊಂದಿಗೆ ವಾಸಿಸುತ್ತಿದ್ದಾರೆ. ಅವರು ಆಟೋದಲ್ಲಿ ಮನೆಗೆ ಮರಳುತ್ತಿದ್ದರು. ಮಂದಿರ ಮಾರ್ಗದ ಖೋಖಾ ಮಾರುಕಟ್ಟೆ ತಲುಪಿದಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ದುಷ್ಕರ್ಮಿಗಳು ಅವರನ್ನು ಸ್ವಲ್ಪ ದೂರ ಎಳೆದೊಯ್ದು ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ. ಶಿಕ್ಷಕಿಯ ಮೂಗು ಮುರಿದಿದೆ. ಜೊತೆಗೆ, ಹಣೆಯ ತಲೆ, ಭುಜ ಸೇರಿದಂತೆ ಹಲವೆಡೆ ಗಾಯಗಳಾಗಿವೆ. ಸಾಕೇತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ದುಷ್ಕರ್ಮಿಗಳು ಮುಖ ಮುಚ್ಚಿಕೊಂಡಿದ್ದರು.

ಇತ್ತೀಚಿನ ಸುದ್ದಿ

Exit mobile version