3:57 AM Wednesday 20 - August 2025

ಮೊಬೈಲಲ್ಲಿ ಹೆಚ್ಚು ರೋಗಾಣುಗಳು ಇರುತ್ತೆ: ಶಾಕಿಂಗ್ ಮಾಹಿತಿ ಹಂಚಿಕೊಂಡ ಬ್ರಿಟನ್ ಕಂಪನಿ ಸರ್ವೇ

16/10/2024

ಸ್ಮಾರ್ಟ್ ಫೋನ್ ಉಪಯೋಗಿಸದವರು ಇವತ್ತು ಬಹಳ ವಿರಳ. ಸಂಪರ್ಕ ಸಾಧನವಾಗಿ ಪರಿಚಯಗೊಂಡ ಫೋನ್ ಗಳು ಇವತ್ತು ಎಲ್ಲರ ಪಾಲಿನ ಅನಿವಾರ್ಯತೆಯಾಗಿ ಮಾರ್ಪಟ್ಟಿದೆ. ಆದರೆ ಸ್ಮಾರ್ಟ್ ಫೋನ್ ನಿಂದ ಆಗುವ ಅನಾಹುತಗಳ ಬಗ್ಗೆ ಬ್ರಿಟನ್ನಿನ ಕಂಪನಿಯೊಂದು ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿದೆ. ಈ ಮಾಹಿತಿ ಆಘಾತಕಾರಿಯಾಗಿದೆ.

ಕೆಲವೊಮ್ಮೆ ಟಾಯ್ಲೆಟ್ ಸೀಟಲ್ಲಿ ಇರುವುದಕ್ಕಿಂತಲೂ ಹೆಚ್ಚು ರೋಗಾಣುಗಳು ಮೊಬೈಲ್ ಫೋನ್ ನಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಮ್ಯಾಟ್ರೇಸ್ನೇಕ್ ಸ್ಟೆಡೋ ಎಂಬ ಕಂಪನಿ ನಡೆಸಿದ ಸರ್ವೆಯಿಂದ ಬಹಿರಂಗವಾಗಿದೆ.
ಇದೇ ವೇಳೆ ಈ ಮೊದಲು ಬಿಡುಗಡೆಗೊಂಡ ಸರ್ವೆಯ ಪ್ರಕಾರ ಟಾಯ್ಲೆಟ್ ನಲ್ಲಿ ಮೊಬೈಲ್ ಫೋನ್ ಉಪಯೋಗಿಸುವುದರಿಂದ ಬ್ಯಾಕ್ಟೀರಿಯಾಗಳು ಮೊಬೈಲ್ ಫೋನ್ ನಲ್ಲಿ ತುಂಬಿಕೊಳ್ಳುವುದಕ್ಕೆ ಹೆಚ್ಚು ಅವಕಾಶ ಇದೆ ಎಂದು ಹೇಳಲಾಗಿತ್ತು. ಈ ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಪ್ರವೇಶಿಸುವುದರಿಂದ ಜೀರ್ಣಕ್ರಿಯೆಗೆ ಮತ್ತು ಮೂತ್ರಶಂಖೆಗೆ ಅಡಚಣೆಯಾಗುವ ಸಾಧ್ಯತೆ ಇದೆ.

ಈ ಸರ್ವೇಯಲ್ಲಿ ಭಾಗವಹಿಸಿದವರ ಪೈಕಿ 55% ಮಂದಿ ಕೂಡ ಒಮ್ಮೆಯೂ ತಮ್ಮ ಸ್ಮಾರ್ಟ್ ಫೋನನ್ನು ಶುದ್ಧಿ ಮಾಡಿಲ್ಲ ಎಂದು ಹೇಳಿದ್ದಾರೆ. 10% ಮಂದಿ ವರ್ಷದಲ್ಲಿ ಒಮ್ಮೆ ಮಾತ್ರ ತಾವು ತಮ್ಮ ಮೊಬೈಲ್ ಫೋನನ್ನು ಶುದ್ಧಿಗೊಳಿಸಿದ್ದಾಗಿ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version