9:13 AM Wednesday 20 - August 2025

ಮದುವೆ ಮನೆಗೆ ಬಂದು ವರನ ಪಕ್ಕ ಕುಳಿತ ಕೋತಿ: ಅತಿಥಿಗಳ ಮೇಲೆ ಕೋತಿಯಿಂದ ದಾಳಿ

monekey
02/07/2024

ಹಾಸನ: ಮದುವೆ ಮನೆಗೆ ಬಂದ ಕೋತಿಯೊಂದು ಅತಿಥಿಗಳಿಗೆ ಉಪಟಳ ನೀಡಿದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ.

ಹಿರಿಸಾವೆಯ ನುಗ್ಗೆಹಳ್ಳ ರಸ್ತೆಯಲ್ಲಿನ ಕಲ್ಯಾಣ ಮಂಟಪ ಮದುವೆ ನಡೆಯುತ್ತಿದ್ದ ವೇಳೆ ಎಂಟ್ರಿ ನೀಡಿದ ಕೋತಿ ವರನ ಪಕ್ಕದಲ್ಲಿ ಬಂದು ಕುಳಿತು ಮದುವೆ ಕಾರ್ಯಕ್ರಮಕ್ಕೆ ತೊಂದರೆ ನೀಡಿದೆ.

ನಂತರ ಊಟದ ಹಾಲ್ ಗೆ ತೆರಳಿದ್ದು, ಊಟ ಮಾಡುತ್ತಿದ್ದವರಿಗೆ ತೊಂದರೆ ನೀಡಿದ್ದು, ಹಲವರಿಗೆ ಕಚ್ಚಿ ಗಾಯಗೊಳಿಸಿದೆ.

ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ, ಗಿರಿಜಮ್ಮ, ತಿಮ್ಮೇಗೌಡ, ಗಿರಿಗೌಡ ಎಂಬವರಿಗೆ ಕೋತಿ ಕಚ್ಚಿದ್ದು, ಅವರಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ಮದುವೆ ಮನೆಯಲ್ಲಿ ಕೋತಿಯ ಗಲಾಟೆಯಿಂದ ಬೇಸತ್ತ ಜನರು ತಕ್ಷಣವೇ ಈ ಕೋತಿಯನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆಗೆ ಒತ್ತಾಯ ಮಾಡಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version