ಗಾಝಾ ಮೇಲಿನ ದಾಳಿ ನಿಲ್ಲಿಸಿ: ಸಾವಿರಕ್ಕಿಂತಲೂ ಅಧಿಕ ಇಸ್ರೇಲ್ ಅಕಾಡೆಮಿಕ್ ತಜ್ಞರಿಂದ ಪತ್ರ

22/05/2024

ಗಾಝಾದ ಮೇಲಿನ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು 1400 ಕ್ಕಿಂತಲೂ ಅಧಿಕ ಇಸ್ರಾಯೇಲ್ ಅಕಾಡೆಮಿಕ್ ತಜ್ಞರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ತಕ್ಷಣವೇ ಯುದ್ಧವನ್ನು ನಿಲ್ಲಿಸಬೇಕು ಮತ್ತು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿಕೊಳ್ಳಬೇಕು ಎಂದು ಅವರು ಈ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಶಿಕ್ಷಕರು ಪ್ರೊಫೆಸರ್ ಗಳು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ವಿವಿಧ ಮಂದಿ ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಯುದ್ಧವನ್ನು ತಕ್ಷಣವೇ ನಿಲ್ಲಿಸಿ ಮತ್ತು ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆಗೊಳಿಸಿಕೊಂಡು ಬನ್ನಿ. ಇದು ಧಾರ್ಮಿಕ ಕರ್ತವ್ಯವೂ ಹೌದು ಮತ್ತು ಇಸ್ರೇಲಿ ನಾಗರಿಕರ ಬಯಕೆಯೂ ಹೌದು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ ಏಳರ ಹಮಾಸ್ ನ ಆಕ್ರಮಣಕ್ಕೆ ಪ್ರತಿಯಾಗಿ ಸ್ವರಕ್ಷಣೆಯ ಹಕ್ಕು ಇಸ್ಯಲಿಗೆ ಇದ್ದೇ ಇದೆ. ಆದರೆ ಅದರ ಗುರಿ ಈಗ ಪೂರ್ತಿ ಗೊಂಡಿದೆ. ಈಗಿನ ಯುದ್ದ ಸ್ಥಿತಿಯಿಂದ ಯಾರಿಗೂ ಲಾಭವಿಲ್ಲ ಮಾತ್ರ ಅಲ್ಲ ಒತ್ತೆಯಾಳುಗಳ ಸಾವಿಗೆ ಮಾತ್ರ ಇದು ಕಾರಣವಾಗಬಹುದು ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

 

 

ಇತ್ತೀಚಿನ ಸುದ್ದಿ

Exit mobile version