1:06 PM Saturday 25 - October 2025

ರಾಜೀನಾಮೆ ಪರ್ವ: ಇಸ್ರೇಲ್ ಸೇನೆಗೆ ಗುಡ್ ಬೈ ಹೇಳಿದ 800 ಕ್ಕಿಂತಲೂ ಅಧಿಕ ಉನ್ನತ ಅಧಿಕಾರಿಗಳು

03/07/2024

ಈ ವರ್ಷ 800 ಕ್ಕಿಂತಲೂ ಅಧಿಕ ಉನ್ನತ ಅಧಿಕಾರಿಗಳು ಇಸ್ರೇಲ್ ಸೇನೆಗೆ ರಾಜಿನಾಮೆ ನೀಡಿರುವುದಾಗಿ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಕರ್ನಲ್ ಮತ್ತು ಲೆಫ್ಟಿನೆಂಟ್ ಕರ್ನಲ್ ರ್‍ಯಾಂಕ್ ನ ಅಧಿಕಾರಿಗಳು ಇವರಲ್ಲಿ ಸೇರಿದ್ದಾರೆ. ಇಂಥದ್ದೊಂದು ಬೆಳವಣಿಗೆ ಇಸ್ರೇಲಿ ಸೇನೆಯ ಮಟ್ಟಿಗೆ ಅಭೂತಪೂರ್ವವಾಗಿದೆ ಎಂದು ಹೇಳಲಾಗಿದೆ.

ಆಂತರಿಕವಾಗಿ ಸುರಕ್ಷಿತತೆಯ ಪ್ರಶ್ನೆಗಳು ಹಾಗೂ ರಾಜಕೀಯ ಸಂಘರ್ಷಗಳು ಈ ರಾಜೀನಾಮೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಹಾಗೆಯೇ ಸಂಘರ್ಷ ಪೀಡಿತ ಪ್ರದೇಶದಲ್ಲಿ ಕೆಲಸ ಮಾಡಲು ಇಷ್ಟ ಇಲ್ಲದೇ ಇರುವುದು ಕೂಡ ಈ ರಾಜೀನಾಮೆಗೆ ಕಾರಣವಾಗಿದೆ. ಆದರೆ ಈ ರಾಜೀನಾಮೆ ಯು ಸೇನೆಗೆ ಬಾರಿ ಹಿನ್ನಡೆಯಾಗಿದೆ ಎಂದು ಪತ್ರಿಕೆಗಳು ಅಭಿಪ್ರಾಯ ಪಟ್ಟಿವೆ.

ಉನ್ನತ ರಾಂಕ್ ನ ಅಧಿಕಾರಿಗಳು ಹೀಗೆ ರಾಜೀನಾಮೆ ನೀಡುವುದು ದೇಶದ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ ಎಂದು ಕೂಡ ಅಭಿಪ್ರಾಯಪಡಲಾಗಿದೆ. ಅದೇ ವೇಳೆ ಯೋಧರಿಗೆ ಮಾನಸಿಕ ಸಮಸ್ಯೆ ಕಾಡುತ್ತಿದೆ ಎಂದು ವರದಿಯಾಗಿದ್ದು ಅದಕ್ಕಾಗಿ ಸೇನೆ ಮಾನಸಿಕ ತಜ್ಞರನ್ನೇ ನೇಮಿಸಿ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದೆ. ಹಾಗೆಯೇ ಸೇನೆ ಮತ್ತು ಸರ್ಕಾರದ ನಡುವೆ ಇರುವ ಭಿನ್ನಾಭಿಪ್ರಾಯಗಳು ಕೂಡ ಯೋಧರನ್ನು ಸೇನೆಯಿಂದ ವಿಮುಖರನ್ನಾಗಿ ಮಾಡುತ್ತಿದೆ ಎಂದು ವರದಿಯಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version