ಮೃತ ಗಂಡನ ನಕಲಿ ದಾಖಲೆ ಸಲ್ಲಿಸಿ ಮೂರು ಕೋಟಿ ರೂ. ವಂಚಿಸಿದ ಪತ್ನಿ

crime
09/02/2022

ಬೆಂಗಳೂರು: ಮೃತಪಟ್ಟ ಗಂಡನ ನಕಲಿ ದಾಖಲೆ ಸಲ್ಲಿಸಿ ಮೂರು ಕೋಟಿ ವಿಮೆ ಕ್ಲೈಮ್ ಮಾಡಿಕೊಂಡ ಪತ್ನಿಯ ವಿರುದ್ಧ ಇನ್ಶ್ಯೂರೆನ್ಸ್​ ಕಂಪೆನಿ ದೂರು ನೀಡಿದೆ.

ಕೃಷ್ಣಪ್ರಸಾದ್ ಗಾರಲಪಟ್ಟಿ ಎಂಬವರು ಟಾಟಾ ಎಐಎ ಲೈಪ್ ಇನ್ಶ್ಯೂರೆನ್ಸ್​ ಕಂಪೆನಿಯಲ್ಲಿ ವಿಮೆ ಪಡೆದಿದ್ದರು. ವಾರ್ಷಿಕವಾಗಿ 51,777 ರೂ. ಕಟ್ಟುವ ಪಾಲಿಸಿ ಪಡೆದಿದ್ದರು. ಆದರೆ ಮೂರು ವರ್ಷ ಪಾಲಿಸಿ ಕಟ್ಟುವ ಮುನ್ನ ಕೃಷ್ಣಪ್ರಸಾದ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕೃಷ್ಣಪ್ರಸಾದ್ ವಿಮೆ ನಾಮಿನಿಯಾಗಿದ್ದ ಹೆಂಡತಿ ಸುಪ್ರಿಯಾ ಅವರು, ಕೃಷ್ಣಪ್ರಸಾದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ದಾಖಲೆ ಸಲ್ಲಿಸಿ ಡೆತ್ ಕ್ಲೈಮ್ ಮಾಡಿ ಕಂಪೆನಿ‌ ಮೂರು ಕೋಟಿ ರೂ. ಪಡೆದಿದ್ದರು. ಆದರೆ ಕೃಷ್ಣಪ್ರಸಾದ್ ಕ್ಯಾನ್ಸರ್​​ನಿಂದ ಮೃತಪಟ್ಟಿದ್ದರು. ನಕಲಿ ದಾಖಲೆ ನೀಡಿ ವಿಮೆ ಕ್ಲೈಮ್ ಮಾಡಿರುವ ಸುಪ್ರಿಯಾ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಮಾ ಕಂಪೆನಿ ಕೋರಮಂಗಲ ಠಾಣೆಗೆ ದೂರು ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇಂಟರ್ವ್ಯೂ ಮುಗಿಸಿ ಬರುತ್ತಿದ್ದವನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ: ಯುವಕನ ಕುತ್ತಿಗೆಗೆ ಗಾಯ

ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲೇ ಲಾರಿ ಚಾಲಕ ಸಾವು

ಮನೆಗೋಡೆ ಕುಸಿದು ಕಾರ್ಮಿಕ ಸ್ಥಳದಲ್ಲೇ ಸಾವು

ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಬೈಕ್ ಡಿಕ್ಕಿಯಾಗಿ ಪರಾರಿಯಾದ ಬೈಕ್: ಮಹಿಳೆ ಸಾವು

ಉದ್ಯೋಗದ ಆಮಿಷ: ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ಮೂವರ ಬಂಧನ

 

ಇತ್ತೀಚಿನ ಸುದ್ದಿ

Exit mobile version