2:04 AM Tuesday 2 - September 2025

ಮೂಡಿಗೆರೆ: ಫೆ.22, 23ರಂದು ಭೂಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮಹಾಧರಣಿ

protest
21/02/2024

ಮೂಡಿಗೆರೆ: ಭೂಸಂಘರ್ಷ ಸಮಿತಿ ಮೂಡಿಗೆರೆ ವತಿಯಿಂದ ಫೆಬ್ರವರಿ 22 ಮತ್ತು 23ರಂದು ಮೂಡಿಗೆರೆಯಲ್ಲಿ ಆಹೋರಾತ್ರಿ ಮಹಾಧರಣಿ  ಹಮ್ಮಿಕೊಳ್ಳಲಾಗಿದೆ.

ಭೂ ಸಮಸ್ಯೆಗಳಾದ ಅಕ್ರಮ ಒತ್ತುವರಿ, ಅಕ್ರಮ ಭೂಮಂಜೂರಾತಿ ತನಿಖೆ ಹಾಗೂ ದಲಿತರ ಭೂಮಿ ದುರಸ್ಥಿಗೆ ಆಗ್ರಹಿಸಿ, ಈ ಆಹೋರಾತ್ರಿ  ಪ್ರತಿಭಟನಾ ಮಹಾಧರಣಿ ಆಯೋಜಿಸಲಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಫೆಬ್ರವರಿ 22ರಂದು ರಾತ್ರಿ 7 ಗಂಟೆಗೆ ಹೈಕೋರ್ಟ್ ನ ಖ್ಯಾತ ವಕೀಲರಾದ ಬಾಲನ್ ಅವರು  ಪಿಟಿಸಿಎಲ್ ಆಕ್ಟ್ ಗೆ ಸಂಬಂಧಿಸಿದಂತೆ ಮಾತನಾಡಲಿದ್ದಾರೆ.

ಈ ಹೋರಾಟವನ್ನು ದಲಿತಪರ, ಕಾರ್ಮಿಕಪರ, ಮಹಿಳಾಪರ, ವಿದ್ಯಾರ್ಥಿ ಸಂಘಟನೆಗಳು ಬೆಂಬಲಿಸಲಿವೆ ಎಂದು ಭೂಸಂಘರ್ಷ ಸಮಿತಿ ಮೂಡಿಗೆರೆ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚಿನ ಸುದ್ದಿ

Exit mobile version