ಮೂಡಿಗೆರೆ: ಸರ್ಕಾರಿ ಹೊರಗುತ್ತಿಗೆ ನೌಕರರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

mudigere
29/12/2025

ಚಿಕ್ಕಮಗಳೂರು: ಮೂಡಿಗೆರೆಯ ಜೈಭೀಮ್ ಹಾಲ್‌ ನಲ್ಲಿ ಸರ್ಕಾರಿ ಹೊರಗುತ್ತಿಗೆ ನೌಕರರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಜಿಲ್ಲಾ ಅಧ್ಯಕ್ಷ ಮಂಜು ಮತ್ತು ಉಪಾಧ್ಯಕ್ಷ ಗಿರೀಶ್ ಉದ್ಘಾಟಿಸಿ, ನೌಕರರಲ್ಲಿ ಒಗ್ಗಟ್ಟು ಇರುವಂತೆ ಸಲಹೆ ನೀಡಿದರು.

ತಾಲೂಕು ಅಧ್ಯಕ್ಷರಾಗಿ ಪೂರ್ಣೇಶ್ ಹೆಬ್ರಿಗೆ ಆಯ್ಕೆಯಾದರು. ಉಳಿದಂತೆ ಜೀವಿತ (ಉಪಾಧ್ಯಕ್ಷರು), ದಿನೇಶ್ (ಪ್ರಧಾನ ಕಾರ್ಯದರ್ಶಿ), ಭಾರ್ಗವಿ (ಕಾರ್ಯದರ್ಶಿ), ಅಣ್ಣಪ್ಪ (ಸಂಘಟನ ಕಾರ್ಯದರ್ಶಿ) ಹಾಗೂ ರಾಗಿಣಿ (ಖಜಾಂಚಿ) ಅವರು ಪದಾಧಿಕಾರಿಗಳಾಗಿ ಆಯ್ಕೆಯಾದರು. ಅಲ್ಲದೆ ಪ್ರತಿ ಇಲಾಖೆಯ ಒಬ್ಬ ನೌಕರರು ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಮಣಿ, ಜಿಲ್ಲಾ ಕಾರ್ಯದರ್ಶಿ ದರ್ಶನ್, ಸಂಘಟನ ಸಂಚಾಲಕ ಪ್ರದೀಪ್, ಜಿಲ್ಲಾ ನಿರ್ದೇಶಕಿ ಶೈಲಾ ಹಾಗೂ ತಾಲೂಕು ಸಂಘಟಕ ಸುಂದ್ರೇಶ್ ಸೇರಿದಂತೆ ವಿವಿಧ ಇಲಾಖೆಯ ನೌಕರರು ಹಾಜರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version