1:56 AM Thursday 29 - January 2026

ಮಸೀದಿ ಬಳಿ ಅನಧಿಕೃತ ಜಾಗ ಇದ್ರೆ ನೀವೇ ಕೆಡವಿ: ಪಾಲಿಕೆಗೆ ಮುಸ್ಲಿಮರಿಂದಲೇ ಮನವಿ..!

12/09/2024

ವಿವಾದದ ಕೇಂದ್ರಬಿಂದುವಾಗಿರುವ ಶಿಮ್ಲಾದ ಸಂಜೌಲಿ ಮಸೀದಿಯ ಅನಧಿಕೃತ ಭಾಗವನ್ನು ಕೆಡವುವಂತೆ ಮುಸ್ಲಿಂ ಸಮುದಾಯದ ಪ್ರತಿನಿಧಿಗಳೇ ಗುರುವಾರ ಶಿಮ್ಲಾದ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದಾರೆ.

ಕೆಲ ಹಿಂದೂ ಸಂಘಟನೆಗಳು ಮಸೀದಿಯಲ್ಲಿ ಅನಧಿಕೃತ ಜಾಗ ಇದೆ ಎಂದು ಪ್ರತಿಭಟನೆ ನಡೆಸಿದ ನಂತರ ಈ ಬೆಳವಣಿಗೆ ‌ನಡೆದಿದೆ. ಬುಧವಾರವಷ್ಟೇ ಕೆಲವು ಹಿಂದೂ ಗುಂಪುಗಳು ಶಿಮ್ಲಾದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದವು. ಇದೇ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮತ್ತು ನೀರಿನ ಫಿರಂಗಿಗಳನ್ನು ಬಳಸಬೇಕಾಯಿತು.

ಈ ಕುರಿತು ಮಾತನಾಡುದ ಸಂಜೌಲಿ ಮಸೀದಿಯ ಇಮಾಮ್ ಶೆಹಜಾದ್, “ನಾವು ಮಹಾನಗರ ಪಾಲಿಕೆಯನ್ನು ಸಂಪರ್ಕಿಸಿದ್ದೇವೆ. ಮಸೀದಿಯ ಕೆಲವು ಭಾಗವು ಕಾನೂನುಬಾಹಿರವೆಂದು ಅವರು ಭಾವಿಸಿದರೆ, ಅದನ್ನು ಮುಚ್ಚಲು ನಿಗಮವು ಅವಕಾಶ ನೀಡಬೇಕು ಮತ್ತು ಅದನ್ನು ಕೆಡವುವ ಅಗತ್ಯವಿದ್ದರೆ, ಸಮುದಾಯಕ್ಕೆ ಅದನ್ನು ಕೆಡವಲು ಅವಕಾಶ ನೀಡಬೇಕು ಎಂದು ವಿನಂತಿಸಿದ್ದೇವೆ” ಎಂದು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version