ಧಾರ್ಮಿಕ ಮೆರವಣಿಗೆ ವೇಳೆ ಉಗುಳಿದ ಆರೋಪ: ಮಧ್ಯಪ್ರದೇಶದಲ್ಲಿ ಮೂವರು ಮುಸ್ಲಿಂ ಯುವಕರ ಮನೆ ಧ್ವಂಸ..!

ಧಾರ್ಮಿಕ ಮೆರವಣಿಗೆ ಹೋಗುತ್ತಿದ್ದಾಗ ಉಗುಳಿದ್ದಾರೆ ಎಂದು ಆರೋಪಿಸಿ ಮಧ್ಯಪ್ರದೇಶದ ಉಜೈನಿಯಲ್ಲಿ ಮೂವರು ಮುಸ್ಲಿಂ ಯುವಕರಿಗೆ ಸೇರಿದ ಮನೆಗಳ ಭಾಗಗಳನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ.
ಈ ಕುರಿತು ವಿಡಿಯೋವೊಂದನ್ನು ಹಿಂದೂತ್ವ ವಾಚ್ ಎಂಬ ಸಂಘಟನೆ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ಮನೆ ಧ್ವಂಸ ಸಂದರ್ಭದಲ್ಲಿ ಡ್ರಮ್ಮರ್ ಗಳೊಂದಿಗೆ ಸ್ಥಳೀಯ ಆಡಳಿತ ಮತ್ತು ಪೊಲೀಸರು ಇರುವುದನ್ನು ತೋರಿಸುತ್ತದೆ.
ಆರೋಪಿತರ ಬಗ್ಗೆ ಪೊಲೀಸರು ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಕಂದಾಯ ಇಲಾಖೆಗೆ ಮಾಹಿತಿ ನೀಡಿದ ನಂತರ ಅವರ ಮನೆಗಳ ಭಾಗಗಳನ್ನು ಪತ್ತೆ ಹಚ್ಚಿದ ಸ್ಥಳೀಯ ಆಡಳಿತ, ಸರಕುಗಳನ್ನು ಮನೆಗಳಿಂದ ತೆರವುಗೊಳಿಸುವಂತೆ ನಿವಾಸಿಗಳಿಗೆ ಹೇಳಿದ ಬಳಿಕ ಧ್ವಂಸಗೊಳಿಸಲಾಯಿತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಆಕಾಶ್ ಭುರಿಯಾ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಜುಲೈ 17 ರಂದು ಉಜ್ಜಯಿನಿಯಲ್ಲಿ ನಡೆದ ‘ಬಾಬಾ ಮಹಾಕಾಲ್ ಸವಾರಿ’ ಮೆರವಣಿಗೆ ಸಂದರ್ಭದಲ್ಲಿ ಕೆಲವು ಯುವಕರು ಕಟ್ಟಡದ ಬಾಲ್ಕನಿಯಲ್ಲಿ ನಿಂತು ಉಗುಳಿದ್ದಾರೆ ಎಂದು ಆರೋಪಿಸಲಾಗಿದೆ. ಮೆರವಣಿಗೆಯಲ್ಲಿದ್ದವರು ವಿಡಿಯೋ ಚಿತ್ರೀಕರಣ ಮಾಡಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದಡಿ ಭಾರತೀಯ ದಂಡ ಸಂಹಿತೆಯಡಿ (ಐಪಿಸಿ) ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw