ನೃತ್ಯ ಮಾಡಲು ಬಾರದವ ಅಂಗಳ ಡೊಂಕು ಅಂದನಂತೆ: ಗಾದೆ ಮೂಲಕ ಕಾಂಗ್ರೆಸ್ ಗೆ ನಳಿನ್ ಕುಮಾರ್ ತಿರುಗೇಟು

ಕೇಂದ್ರದಿಂದ ವೆಬ್ ಸೈಟ್ ಹ್ಯಾಕ್ ಬಗ್ಗೆ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ನೃತ್ಯ ಮಾಡಲು ಬಾರದವ ಅಂಗಳ ಡೊಂಕು ಅಂದನಂತೆ. ಈ ಗಾದೆಯಂತೆ ಕಾಂಗ್ರೆಸ್ ನ ಪರಿಸ್ಥಿತಿ ಆಗಿದೆ. ಕಾಂಗ್ರೆಸ್ ಬಿಟ್ಟಿ ಭಾಗ್ಯ ಘೋಷಿಸಿ ಅದನ್ನ ಕೊಡಲು ವ್ಯವಸ್ಥೆ ಆಗ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸೋ ಕೆಲಸ ಮಾಡ್ತಿದ್ದಾರೆ. ಕೇಂದ್ರ ಸರ್ಕಾರ ಹತ್ತು ವರ್ಷಗಳಲ್ಲಿ ಹತ್ತು ಕೆ.ಜಿ.ಅಕ್ಕಿ ಕೊಡೋ ಕೆಲಸ ಮಾಡಿದೆ ಎಂದ ಅವರು ಹಿಂದೆ ಸಿದ್ದರಾಮಯ್ಯ ಇದ್ದಾಗಲೂ 27 ರೂ. ಕೇಂದ್ರ ಸರ್ಕಾರ ಕೊಡ್ತಾ ಇತ್ತು. ಮೂರು ರೂ. ರಾಜ್ಯ ಸರ್ಕಾರ ಕೊಟ್ಟರೂ ಭಾವಚಿತ್ರ ಸಿದ್ದರಾಮಯ್ಯರದ್ದೇ ಇತ್ತು. ಚುನಾವಣೆ ಬಂದಾಗ ಪ್ರಣಾಳಿಕೆಯಲ್ಲಿ ಹತ್ತು ಕೆ.ಜಿ ಅಕ್ಕಿ ಕೊಡ್ತೀವಿ ಅಂದಿದ್ದು ಕಾಂಗ್ರೆಸ್. ಇವತ್ತು ಹತ್ತು ಕೆ.ಜಿ ಕೊಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
ಆವತ್ತು ಕೇಂದ್ರ ಸರ್ಕಾರ ಕೊಟ್ರೆ ಮಾತ್ರ ಕೊಡ್ತೀವಿ ಅಂತ ಹೇಳಿದ್ರಾ? ಎಂದು ಪ್ರಶ್ನಿಸಿದ್ರು. ಕೇಂದ್ರ ಐದು ಕೆ.ಜಿ ಕೊಡ್ತಾ ಇದೆ, ಕೋವಿಡ್ ಬಂದಾಗಲೂ ಕೊಡ್ತಾ ಇದೆ. ಆದರೆ ಎರಡು ಲಕ್ಷ ಟನ್ ಅಕ್ಕಿಗೆ ಪ್ರಧಾನಿ ಹತ್ರ ಯಾರೂ ಬೇಡಿಕೆ ಇಟ್ಡಿಲ್ಲ. ಸುಮ್ಮನೆ ಪ್ರಚಾರ ಮತ್ತು ರಾಜಕಾರಣ ಮಾಡಲು ಹೇಳಿಕೆ ಕೊಡ್ತಾ ಇದ್ದಾರೆ. ಕಾಂಗ್ರೆಸ್ ನ ಹೋರಾಟಕ್ಕೆ ನಾನು ಅಭಿನಂದನೆ ಸಲ್ಲಿಸ್ತೇನೆ. ಅವರ ಭರವಸೆಯಂತೆ ಅಕ್ಕಿ ಕೊಡಲು ಆಗದ್ದಕ್ಕೆ ಕಾಂಗ್ರೆಸ್ ವಿರುದ್ದವೇ ಪ್ರತಿಭಟನೆ ಮಾಡ್ತಾ ಇದ್ದಾರೆ. ಇವರ ಸರ್ಕಾರದ ವಿರುದ್ದ ಮಾಡೊ ಪ್ರತಿಭಟನೆ ಮೂರ್ಖತನ. ಇದೆಲ್ಲಾ ಆದ ಮೇಲೆ ಈಗ ಹ್ಯಾಕ್ ಆರೋಪ ಮಾಡ್ತಾ ಇದ್ದಾರೆ.
ಕೇಂದ್ರ ಸರ್ಕಾರ ಇಂತಹ ಕೆಲಸ ಮಾಡಲ್ಲ, ಇದು ಕಾಂಗ್ರೆಸ್ ವಿಫಲತೆಯಾಗಿದೆ. ಯಾವುದೇ ಹ್ಯಾಕ್ ಕೇಂದ್ರ ಅಥವಾ ಯಾವುದೇ ಸರ್ಕಾರ ಮಾಡಲ್ಲ. ಹಾಗಿದ್ರೆ ಇವರ ಸರ್ಕಾರ ಈಗ ಹ್ಯಾಕ್ ಮಾಡುತ್ತಾ? ಎಂದ ಅವರು ಬಿಜೆಪಿ ಕೈಯ್ಯಲ್ಲಿರೋ ಪಾಲಿಕೆ ಹಾಗೂ ಬೇರೆ ಆಡಳಿತದಲ್ಲಿ ಇವರಿಗೆ ಹ್ಯಾಕ್ ಮಾಡಲು ಆಗುತ್ತಾ? ಈ ಆರೋಪವನ್ನು ಎಲ್ಲರೂ ಹಾಕಬಹುದು, ಇವರಿಗೆ ನೈತಿಕತೆ ಇಲ್ಲ. ನೈತಿಕತೆ ಇದ್ರೆ ಜನರಿಗೆ ಹತ್ತು ಕೆ.ಜಿ ಅಕ್ಕಿ ಕೊಡಲಿ. ಕೇಂದ್ರ ಸರ್ಕಾರ ಯಾವುದೇ ಅಕ್ಕಿ ಕಡಿತ ಮಾಡಿಲ್ಲ. ಇಲ್ಲಿ ಮಾತ್ರ ನಮ್ಮ ವಿರೋಧ ಪಕ್ಷದ ಸರ್ಕಾರ ಇಲ್ಲ, ಕೆಲವು ರಾಜ್ಯದಲ್ಲಿ ಇದೆ. ಎಲ್ಲೂ ಕೇಂದ್ರ ಸರ್ಕಾರ ಇಂಥದ್ದನ್ನ ಮಾಡಿಲ್ಲ. ಸಿದ್ದರಾಮಯ್ಯ ಸುಮ್ಮನೆ ಚಿಲ್ಲರೆ ರಾಜಕಾರಣ ಮಾಡ್ತಾ ಇದ್ದಾರೆ ಎಂದು ಕಿಡಿಕಾರಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw